ಉಡುಪಿ: ವಿಜಯಪುರ ಸಾಹಿತ್ಯ ಮತ್ತು ಸಾಂಸ್ಕತಿಕ ವೇದಿಕೆ(ರಿ) ಇವರು ಕೊಡಮಾಡುವ ಯುವ ಸ್ಪಂದನ ರಾಜ್ಯ ಮಟ್ಟದ ಪ್ರಶಸ್ತಿಗೆ ಯುವ ಸಮಾಜಿಕ ಕಾರ್ಯಕರ್ತ,ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ರವರು ಆಯ್ಕೆಯಾಗಿದ್ದಾರೆ.
ಕಳೆದ 10 ವರ್ಷಗಳಲ್ಲಿ ನಡೆಸಿದ ವಿವಿಧ ಸಾಮಜಿಕ ಕಾರ್ಯಕ್ರಮಗಳನ್ನು ಗಮನಿಸಿ ಈ ಪುರಸ್ಕಾರ ನೀಡಲಾಗುತ್ತಿದೆ. ಪ್ರಶಸ್ತಿ ಸಮಾರಂಭವು ಎಪ್ರಿಲ್ 2 ರಂದು ವಿಜಯಪುರದ ಸಭಾ ಭವನದಲ್ಲಿ ನಡೆಯಲಿದೆ.ಸಮಾರಂಭದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್,ಸಿದ್ದಾರೂಡ ಮಠದ ಶ್ರೀಗಳು,ವೇದಿಕೆಯ ಅದ್ಯಕ್ಷ ಬಂಡೆಪ್ಪ ತೇಲಿ ಭಾಗವಹಿಸಲಿರುವರು.
