ಉಡುಪಿ: ಭಾರತೀಯ ಜೇಸಿಸ್ ವಲಯ ಹದಿನೈದರ ತರಬೇತುದಾರರಿಗೆ ಪುನರುದ್ದೀಪನಾ ಕಾರ್ಯಕ್ರಮ ವು ಮಾ.  19ರಂದು ಮಣಿಪಾಲದ ಫಾರ್ಚೂನ್‍ಇನ್ನ್ ವ್ಯಾಲಿವ್ಯೂನಲ್ಲಿ ನಡೆಯಿತು.  ಜೇಸಿಐ ಪರ್ಕಳದ ಆತಿಥ್ಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಪೂರ್ವ ವಲಯಾಧ್ಯಕ್ಷ ಮತ್ತು ಖ್ಯಾತ ಜೇಸಿಸ್ ರಾಷ್ಟ್ರೀಯತರಬೇತುದಾರ ಜೇಸಿ ರಾಜೇಂದ್ರ ಭಟ್ ಉದ್ಘಾಟಿಸಿದರು.

Rejuvenate 2017 Inauguration Cropped MS1_8297
ಪೂರ್ವರಾಷ್ಟ್ರೀಯಉಪಾಧ್ಯಕ್ಷ ಜೇಸಿ ಸದಾನಂದ ನಾವುಡ, ಜೇಸಿಐ ಪ್ರತಿಷ್ಟಾನದ ನಿರ್ದೇಶಕ ವೈ.ಸುಕುಮಾರ್, ವಲಯಾಧ್ಯಕ್ಷ ಜೇಸಿ ಸಂತೋಷ್ ಜಿ., ನಿಕಟಪೂರ್ವ ವಲಯಾಧ್ಯಕ್ಷ ಜೇಸಿ ಸಂದೀಪ್‍ಕುಮಾರ್, ವಲಯಉಪಾಧ್ಯಕ್ಷ ಜೇಸಿ ಮರಿಯಪ್ಪ, ತರಬೇತಿ ವಿಭಾಗದ ವಲಯ ನಿರ್ದೇಶಕ ಜೇಸಿ ಮಂದಾರ್ ವಿ. ಕಾಳೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ವಲಯದ ಟ್ರೈನಿಂಗ್ ಬ್ರಿಗೇಡಿಯರ್ ಮತ್ತುರಾಷ್ಟ್ರೀಯತರಬೇತುದಾರ ಜೇಸಿ ರಾಜೇಶ್ ಡಿ. ಶೆಣೈಅಧ್ಯಕ್ಷತೆ ವಹಿಸಿದ್ದರು. ಖ್ಯಾತಅಂತರಾಷ್ಟ್ರೀಯಕಾರ್ಫೋರೆಟ್‍ ತರಬೇತುದಾರ ಜೇಸಿಐ ಸೆನೆಟರ್ ಮಹೇಶ್ ಭಗವಾನ್‍ದಾಸ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ವಲಯದ ಐಟಿ ಮತ್ತು ಪಬ್ಲಿಕೇಶನ್‍ ಅಧಿಕಾರಿ ಜೇಸಿ ಮನೋಜ್‍ಕಡಬರವರು ಸಂಯೋಜಿಸಿದ ರೆಜುವಿನೇಟ್‍ಟ್ರೈನರ್‍ಇ-ಡೈರೆಕ್ಟರಿಯನ್ನು ವಲಯಾಧ್ಯಕ್ಷರು ಬಿಡುಗಡೆಗೊಳಿಸಿದರು. ಜೇಸಿಐ ಭಾರತದ ಪೂರ್ವ ಪ್ರಧಾನ ಕಾನೂನು ಸಲಹಾಧಿಕಾರಿ ಜೇಸಿ ಶ್ರೀಧರ ಪಿ.ಎಸ್., ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅತಿಥೇಯ ಘಟಕದ ಅಧ್ಯಕ್ಷೆ ಜೇಸಿ ಆಶಾ  ಅತಿಥಿಗಳನ್ನು ಸ್ವಾಗತಿಸಿದರು. ಜೇಸಿ ಪಲ್ಲವಿ ಆರ್. ಶೆಣೈ ಜೇಸಿವಾಣಿ ಉದ್ಘೋಷಿಸಿದರು. ಕಾರ್ಯಕ್ರಮ ನಿರ್ದೇಶಕಿ ಜೇಸಿ ವಿನುತಾ ವಂದಿಸಿದರು.

By suddi9

Leave a Reply

Your email address will not be published. Required fields are marked *