ಕೈಕಂಬ: ಅಡ್ಡೂರು ಕಳಸಗುರಿ ಎಂಬಲ್ಲಿ ಮಹಮ್ಮದ್ ರಮೀಝ್ (18)ವರ್ಷದ ಯುವಕ ಅಪ್ಪಾಚಿ ಬೈಕ್ ನಲ್ಲಿ ಅಡ್ಡೂರಿನಿಂದ ಕಳಸಗುರಿ ಕಾಂಜಿಲಕೋಡಿ ಮಸೀದಿಯ ಹತ್ತಿರದ ತನ್ನ ಮನೆಗೆ ಬೈಕ್ ನಲ್ಲಿ ಹೋಗುವ ಸಂದರ್ಭ ಕಳಸಗುರಿ ಕಾಜಿಲಕೋಡಿ ಎಂಬಲ್ಲಿ ಎದುರಿನಲ್ಲಿ ಬಂದ ಆಕ್ಟೀವಾ ಹೊಂಡ ಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ನಗರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಮ್ಮದ್ ರಮೀಝ್ ವಾಮಂಜೂರಿನ ಸೈಂಟ್ ರೈಮಂಡ್ಸ್ ಪ್ರಥಮ ಡಿಗ್ರಿಯ ವಿದ್ಯಾರ್ಥಿಯಾಗಿದ್ದಾನೆ. ಮಹಮ್ಮದ್ ರಮೀಝ್ ಅವರ ತಂದೆ ಬಸೀರ್ ಹೊರದೇಶದಲ್ಲಿ ಉದ್ಯೋಗದಲ್ಲಿದ್ದು ಇಂದು ಊರಿಗೆ ಆಗಮಿಸಲಿದ್ದಾರೆ. ಬಸೀರ್ ಅವರಿಗೆ ಒಂದು ಹೆಣ್ಣು ಮಗಳು ಮೂರು ಗಂಡು ಮಕ್ಕಳಲ್ಲಿ ಹಿರಿಯ ಮಗನಾಗಿದ್ದಾನೆ. ಅಂತ್ಯಕ್ರಿಯೆಯು ಕಾಂಜಿಲಕೊಡಿ ಮಸೀದಿಯಲ್ಲಿ ನಡೆಯಿತು.
