ಬಂಟ್ವಾಳ ; ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ಕ್ಲಬ್ ಹಾಗೂ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ “ಮಾಧ್ಯಮ; ಭವಿಷ್ಯದ ಸವಾಲುಗಳು” ಕುರಿತಾದ ವಿಚಾರ ಸಂಕಿರಣವು ಮಾ.21 ರಂದು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ರಾಜ್ಯಮಟ್ಟದ ಅನುಭವಿ ಪತ್ರಕರ್ತರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ವ್ಯಾಫ್ತಿಯ ಪತ್ರಿಕೋದ್ಯಮ ಹಾಗೂ ಪದವಿ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಆಸಕ್ತರು ತಮ್ಮ ಕಾಲೇಜು ಮುಖ್ಯಸ್ಥರ ಮೂಲಕ ಮಾ.15 ರ ಒಳಗಾಗಿ “ ಬಂಟ್ವಾಳ ಪ್ರೆಸ್ಕ್ಲಬ್, ಬಿ.ಸಿ.ರೋಡು-574219” ಅಥವಾ 9481017606 ಅನ್ನು ಸಂಪರ್ಕಿಸಬಹುದಾಗಿದೆ.
