ಬಂಟ್ವಾಳ : ವಲಯ ಕಾಂಗ್ರೆಸ್ ಇದರ ವತಿಯಿಂದ ರಸ್ತೆ ನಿರ್ಮಾಣಕ್ಕೆ ಸ್ಥಳದಾನ ನೀಡಿದ ಬಿ.ಎ.ಗ್ರೂಪ್ ಸಂಸ್ಥಾಪಕ ಅಹ್ಮದ್ ಹಾಜಿ ಮೊಹಿಯುದ್ದೀನ್ ಮತ್ತು ಬಸ್ತಿ ವಾಮನ್ ಶೆಣೈ ಯವರನ್ನು ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ನಿಸಾರ್ ಅಹ್ಮದ್, ಮೊಹಿದ್ದೀನ್ ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್ ಲತೀ ಫ್ ಫೈಜಿ, ಅಧ್ಯಕ್ಷ ಅಬುಬಕ್ಕರ್ ಹಾಜಿ, ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ತಾ.ಪಂ.ಸದಸ್ಯ ಜಬ್ಬಾರ್ ಸಿ.ಡಿ. , ಭೂ ಬ್ಯಾಂಕ್ ನಿರ್ದೇಶಕ ಪ್ರಕಾಶ್ ಬಿ.ಶೆಟ್ಟಿ, ವಲಯ ಕಾಂಗ್ರೆಸ್ ಉಪಾಧ್ಯಕ್ಷ ಮೋನಪ್ಪ ಮಜಿ., ಪ್ರಮುಖರಾದ ಅಬ್ದುಲ್ ರಶೀದ್, ಪ್ರವೀಣ್ ಕುಮಾರ್, ಮಹಾಬಲ, ಲೋಕನಾಥ್, ಮಾಧವ, ಇಮ್ತಿಯಾಜ್ ಅಲ್ಫಾ, ಅಬೀಬ್, ಗಣೇಶ್, ಜಗನ್ನಾಥ್, ಶರೀಫ್, ರ ಶೀದ್, ಫಯಾಜ್, ಅಮೀನ್, ಸೈಫ್, ಆಸಿರ್, ಯಾಸರ್ ಮತ್ತಿತರರು ಉಪಸ್ಥಿತರಿದ್ದರು.

