ಕೈಕಂಬ:ಶ್ರೀಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ವಜ್ರದೇಹಿ ಮಠ ಗುರುಪುರ ಇದರ ಆಶ್ರಯದಲ್ಲಿ ಪ್ರಶಾಂತ್ ಗುರುಪುರ ಇವರ ಸಾರಥ್ಯದಲ್ಲಿ ನಿರ್ಮಾಣಗೊಂಡಿರುವ ವಿನೂತನ “ಗುರುದಯ” ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇದರ ಉದ್ಘಾಟನಾ ಸಮಾರಂಭವು ಮಾ.12 ಅದಿತ್ಯವಾರ ಬೆಳ್ಳಗೆ 8.30ಕ್ಕೆ ಜರುಗಲಿದೆ. ಗುರುಪುರ ವಜ್ರದೇಹಿ ಮಠದ ಶ್ರೀಶ್ರೀಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಉದ್ಘಾಟನೆಯನ್ನು ಮಂಗಳೂರು ಲಕುಮಿ ತಂಡದ ಕಿಶೋರ್ ಡಿ.ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಲಕುಮಿ ತಂಡದ ನವೀನ್ ಶೆಟ್ಟಿ ಅಳಕೆ ಹಾಗೂ ಹಲವಾರು ಗಣ್ಯರು ಭಾಗವಹಿಸಲಿರುವರು.
ಬೆಳಿಗ್ಗೆ 8.15ಕ್ಕೆ ಪ್ರಶಾಂತ್ ಗುರುಪುರ ಇವರ ಕಥೆ ಸಂಭಾಷಣೆಯಲ್ಲಿ ಶ್ರೀ ಜಿ.ಎಸ್ ಗುರುಪುರ ಇವರ ಸಾಹಿತ್ಯ, ಪಚ್ಚು ಕೈಕಂಬ ಇವರ ನಿರ್ದೇಶನದಲ್ಲಿ “ಬದ್ಕೆರಾಪುಜಿ” ತುಳು ಹಾಸ್ಯಮಯ ನಾಟಕ ಇದರ ಮಹೂರ್ತ ನಡೆಯಲಿದೆ.

