ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಕ್ಷೇತ್ರಕ್ಕೆ ಸಂಬಂಧಿಸಿದ “ಕೋಡಿ ಪಂಜುರ್ಲಿ” ಹಾಗೂ “ಕುಮೇರು ತುಕ್ರ” ದೈವಗಳ ಪುನರ್ ಪ್ರತಿಷ್ಠಾ ಸಾನಿಧ್ಯ ಕಲಶಾಭಿಷೇಕವು ಮಾ.9ರಂದು ಗುರುವಾರ ಬೆಳಗ್ಗೆ 7.24ಕ್ಕೆ ಜರಗಲಿದೆ.
ಪ್ರಾತ:ಕಾಲ 5ರಿಂದಪುಣ್ಯಾಹ,ಗಣಪತಿ ಹೋಮ, ಕಲಶಪೂಜೆ,ಪ್ರತಿಷ್ಟಾ ಪ್ರಧಾನ ಹೋಮ 7.24 ಕ್ಕೆ ನಡೆಯುವ ಮೀನಲಗ್ನದಲ್ಲಿ ದೈವಗಳ ಪ್ರತಿಷ್ಠೆ ಸಾನಿಧ್ಯ ಕಲಾಶಾಭಿಷೇಕ ಮಹಾಪೂಜೆ ಪ್ರಸಾದ ವಿತರಣೆ ಜರಗಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

