ಮೂಡುಬಿದಿರೆ: ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗೂ ಸಿಟಿ ಮ್ಯಾನೇಜರ್ಸ್ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ವಿಕಾಸಸೌಧ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಸೇವೆಗಳಲ್ಲಿ ಅಳವಡಿಸಿರುವ ಉತ್ತಮ ಪದ್ಧತಿಯನ್ನು ದಾಖಲಿಸಿಕೊಂಡು ಸ್ವೀಕೃತವಾದ ಉತ್ತಮ ಪದ್ಧತಿಗಳ ದಾಖಲೀಕರಣದಲ್ಲಿ ಮೂಡುಬಿದಿರೆ ಪುರಸಭೆಯು ಘನತ್ಯಾಜ್ಯ ನಿರ್ವಹಣೆಯ ಪದ್ಧತಿಯಲ್ಲಿ ವಿವಿಧ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಉತ್ತಮವೆಂದು ಗುರುತಿಸಿ 2ನೇ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ,

mbd_march2_8
ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಈಶ್ವರ್ ಬಿ ಖಂಡ್ರೆ, ನಗರಾಭಿವೃದ್ಧಿ ಸಚಿವ ]ಆರ್.ರೋಷನ್ ಬೇಗ್ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಥಮ ಪ್ರಶಸ್ತಿಯು ಮಾದರಿ ರಸ್ತೆ, ಮಾದರಿ ಜನ ಎಂಬ ಜನಾಂದೋಲನದ ಕಾರ್ಯಕ್ರಮ ಆಯೋಜಿಸುತ್ತಿರುವ ಬಾಗಲಕೋಟೆ ನಗರಸಭೆಗೆ ದೊರಕಿದೆ ಮತ್ತು 3ನೇ ಪ್ರಶಸ್ತಿ ಹೈಡ್ರಾಲಿಕ್ ಬ್ರೂಮರ್ ಅಳವಡಿಸಿ ಪಟ್ಟಣದ ಮುಖ್ಯ ರಸ್ತೆಗಳನ್ನು ಗುಡಿಸುವ ಪದ್ಧತಿಗೆ ಚಿಕ್ಕೋಡಿ ಪುರಸಭೆಗೆ ದೊರಕಿದೆ.

By suddi9

Leave a Reply

Your email address will not be published. Required fields are marked *