ಮೂಡುಬಿದಿರೆ: ಶಿವರಾತ್ರಿ ಪ್ರಯುಕ್ತ ಬೆಂಗಳೂರು ಆನೇಕಲ್ ತಾಲೂಕಿನ ಚಂದ್ರಾಪುರ ಸೂರ್ಯನಗರದಲ್ಲಿ ನಡೆದ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡವು ಚಾಂಪಿಯನ್ ಆಗಿ ಮೂಡಿಬಂದಿದೆ.

mbd_march2_7(a)

mbd_march2_7
ಪುರುಷರ ವಿಭಾಗದ ಫೈನಲ್‍ನಲ್ಲಿ ಆಳ್ವಾಸ್ ತಂಡವು 26-11 ಅಂಕಗಳ ಅಂತರದಲ್ಲಿ ಬಿವೈಎಸ್ ಬೆಂಗಳೂರು ತಂಡವನ್ನು ಸೋಲಿಸಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮಹಿಳಾ ವಿಭಾಗದ ಫೈನಲ್‍ನಲ್ಲಿ ಆಳ್ವಾಸ್ ಕೆಎಸ್‍ಪಿ ಬೆಂಗಳೂರು ತಂಡವನ್ನು 21-20 ಅಂಕಗಳ ಅಂತರದಲ್ಲಿ ಸೋಲಿಸಿ ಚಾಂಪಿಯನ್ ಆಗಿ ಮೂಡಿಬಂತು.
ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡದ ವಿಶ್ವರಾಜ್ ಮತ್ತು ಮಹಿಳಾ ವಿಭಾಗದಲ್ಲಿ ಸೌಮ್ಯ ಸರ್ವಾಂಗೀಣ ಆಟಗಾರ ಪ್ರಶಸ್ತಿಯನ್ನು ಪಡೆದರು.

By suddi9

Leave a Reply

Your email address will not be published. Required fields are marked *