ಮುಂಬಯಿ, ಫೆ.28: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿ ಮುಂಬಯಿಗೆ ಭೇಟಿ ನೀಡಲಿದ್ದು ಇದೇ ಮಾರ್ಚ್.04ನೇ ಶನಿವಾರ ಸಂಜೆ ಸೋಂದಾಶ್ರೀ ಮಹಾನಗರ ಮುಂಬಯಿಗೆ ಪಾದಾರ್ಪಣೆ ಗೈಯಲಿದ್ದು ಮಾ.11ರ ಶನಿವಾರ ವರೇಗೆ ಶ್ರೀ ಶಂಕರ ಮಠ ಮಾಟುಂಗಾ (ಪೂರ್ವ) ಇಲ್ಲಿ ಮೋಕ್ಕಂ ಹೂಡಲಿದ್ದಾರೆ ಎಂದು ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿ ಪದಾಧಿಕಾರಿಗಳು ತಿಳಿಸಿದ್ದಾರೆ.

Shri Sonda Swamiji

ಶ್ರೀಗಳ ವಸತಿಯ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಮಾ.4ನೇ ಶನಿವಾರ ಸಂಜೆ 4.30 ಗಂಟೆಗೆ ಪೂರ್ಣಕುಂಭ ಸ್ವಾಗತ, 5ನೇ ರವಿವಾರ ದಿಂದ 11ನೇ ಶನಿವಾರ ತನಕ ಪ್ರತಿದಿನ ಮುಂಜಾನೆ 8.00 ಗಂಟೆಯಿಂದ ಶ್ರೀಗಳಿಂದ ಕುಂಕುಮಾರ್ಚನೆ ಅಂತೆಯೇ, ಪ್ರತಿದಿನ ಬೆಳಿಗ್ಗೆ 9.00 ಗಂಟೆಯಿಂದ ಪಾದಪೂಜೆ, ಮಧ್ಯಾಹ್ನ1.30 ಗಂಟೆಗೆ ಭಿಕ್ಷಾಸೇವೆ (ಮಾ.8, ಏಕಾದಶಿ ಹೊರತುಪಡಿಸಿ), ಮಾ.4ನೇ ಶನಿವಾರ ಮತ್ತು ಮಾ.5ನೇ ರವಿವಾರ ಸಂಜೆ 5.00 ಗಂಟೆಗೆ ಭಗವದ್ಗೀತಾ ಪ್ರವಚನ ನಡೆಯಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಾನಗರದಾದ್ಯಂತದ ಎಲ್ಲಾ ಭಕ್ತಾದಿಗಳು ಸಕುಟುಂಬ ಇಷ್ಟಮಿತ್ರರಿಂದೊಡಗೂಡಿ ಆಗಮಿಸಿ, ಶ್ರೀಗಳ ದರ್ಶನ ಪಡೆದು, ಅವರ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಿತಿಯ ಎಲ್ಲಾ ಸದಸ್ಯರುಗಳ ಸವಿನಯ ವಿನಂತಿಸಿದ್ದಾರೆ. ನಡೆಯಲಿರುವ ಭಿಕ್ಷಾಸೇವೆ, ಪಾದಪೂಜೆ, ಕುಂಕುಮಾರ್ಚನೆ ಮತ್ತು ಇತರ ಅನೇಕ ಸೇವೆಗಳಿಗೆ ಭಕ್ತರಿಗೆ ಅವಕಾಶಗಳಿವೆ. ಇಚ್ಛಿತರು ವಿ.ಎನ್ ಹೆಗಡೆ 9869007333, ವಸಂತ ಭಟ್ಟ 9867307715, ಕೆ.ಸಿ ಹೆಗಡೆ 9869074115, ಸುರೇಶ ಹೆಗಡೆ 9833910140, ಡಾ| ಎಸ್.ಆರ್ ನಾಯ್ಕ 8454075898, ಮಧುಕರ ನಾಯ್ಕ 9821250228, ಅಶೋಕ ನಾಯ್ಕ 99305282 98 ಇವರನ್ನು ಸಂಪರ್ಕಿಸಬಹುದು ಎಂದು ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

By suddi9

Leave a Reply

Your email address will not be published. Required fields are marked *