ವಿಟ್ಲ ಸೇರಾಜೆ ರಸ್ತೆಯ, ಜೋಗಿಮಠ ಎಂಬಲ್ಲಿ ಇರುವ ಟ್ರಾನ್ಸ್‍ಫಾರ್ಮರ್‍ನಿಂದ ಶನಿವಾರ ಸಂಜೆ ಬೆಂಕಿಯ ಕಿಡಿ ನೆಲದ ಮೇಲಿರುವ ಒಣಗಿದ ಹುಲ್ಲಿನ ಮೇಲೆ ಬಿದ್ದು ಬೆಂಕಿ ಕಾಣಿಸಿಕೊಂಡು, ಸಾರ್ವಜನಿಕರು ಬೆಂಕಿಯನ್ನು ನಿಯಂತ್ರಿಸಿ ಸಂಭವನೀಯ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರರಿಲ್ಲದಿದ್ದರೆ ಸಂಭವಿಸುವ ದುರಂತವನ್ನು ಊಹಿಸಲು ಸಾಧ್ಯವಿಲ್ಲ. ತಕ್ಷಣ ಮೆಸ್ಕಾನವರು ಟ್ರಾನ್ಸ್‍ಫಾರ್ಮರ್ ಸುತ್ತಲೂ ತಡೆಬೇಲಿಯನ್ನು ಮತ್ತು ನೆಲದ ಮೇಲೆ ಜಲ್ಲಿಕಲ್ಲುಗಳನ್ನು ಹರಡಿ ಸಂಭವನೀಯ ದುರಂತವನ್ನು ತಪ್ಪಿಸಿ. ಈ ಟ್ರಾನ್ಸ್‍ಫಾರ್ಮರ್ ರಸ್ತೆಯ ಬದಿಯಲ್ಲಿದ್ದು, ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಇದರಿಂದ ಆಗುವ ಅಪಾಯ ತಪ್ಪಿದ್ದಲ್ಲ.



