ವಿಟ್ಲ :ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯಿಂದ 4 ನೇ ಹಂತದ ಗುರುತು ಚೀಟಿ ವಿತರಣಾ ಕಾರ್ಯಕ್ರಮ ವಿಟ್ಲ ಮಾದರಿ ಶಾಲೆಯ ಸಭಾ ಭವನದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ರವರ ನೇತೃತ್ವದಲ್ಲಿ ನಡೆದ ಈ ಸಭೆಯ ಅಧ್ಯಕ್ಷತೆಯನ್ನು ಸೇಸಪ್ಪ ಪಟ್ಲಗುಡ್ಡೆ ವಹಿಸಿದ್ದರು.0

ವಿಟ್ಲ ಠಾಣೆಯ ಎ ಎಸ್ ಐ ದನಂಜಯ ಮತ್ತು ತಿಮ್ಮಯ್ಯ ಪಂಡಿತ್ ಕನ್ಯಾನ ಇವರು ಸದಸ್ಯರಿಗೆ ಗುರುತು ಚೀಟಿ ವಿತರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಾವತಿ ಎಂ ಮಾಣಿಲ ಉಪಸ್ಥಿತರಿದ್ದರು. ಕೋಶಾಧಿಕಾರಿ ಸುಪ್ರಿತ ಪಿಲಿಂಜ ಸ್ವಾಗತಿಸಿದರು. ಉಪಾಧ್ಯಕ್ಷೆ ದಿವ್ಯಶ್ರೀ ಕಲ್ಲಜೇರ ವಂದಿಸಿದರು. ಕಾರ್ಯದರ್ಶಿ ಚಂದ್ರಶೇಖರ ಯು ವಿಟ್ಲ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *