ವಿಟ್ಲ :ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಾಪಕರಾದ ಬೇಡನ್ ಪೊವೆಲ್‍ರವರ ಜನ್ಮದಿನಾಚರಣೆಯನ್ನು ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆಯನ್ನು ಮಾಡುವುದರ ಮೂಲಕ ಚಿಂತನಾದಿನವನ್ನು ವಿಶೇಷವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ಕೌಟ್ ಶಿಕ್ಷಕರಾದ ಶ್ರೀ ವಿಶ್ವನಾಥ್ ಬಿ, ಶ್ರೀ ದಯಾನಂದ ಎನ್, ಗೈಡ್ಸ್ ಶಿಕ್ಷಕಿಯರಾದ ಕುಮಾರಿ ರಮಾ, ಕಬ್ಸ್ ಶಿಕ್ಷಕಿಯಾದ ಶ್ರೀಮತಿ ದೇವಕಿ ಅಮ್ಮ, ಬುಲ್‍ಬುಲ್ ಶಿಕ್ಷಕಿ ಶ್ರೀಮತಿ ಶಂಕರಿಅಮ್ಮ ಉಪಸ್ಥಿತರಿದ್ದರು.

