ಉಳ್ಳಾಲ:- ಸರಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃಧ್ಧಿಗೆ ಪೂರಕವಾಗಿ ಸರಕಾರದ ಕಾರ್ಯಕ್ರಮವಾದ ಅಕ್ಷರೋತ್ಸವವು ಉಳ್ಳಾಲ ಕ್ಲಸ್ಟರಿನಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉಧ್ಘಾಟಿಸಿದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಕೆ.ಎಂ.ಕೆ ಮಂಜನಾಡಿಯವರು ಇಂತಹ ಉತ್ತಮವಾದ ಕಾರ್ಯಕ್ರಮವನ್ನು ಅಳವಡಿಸಿದ ಸರಕಾರವನ್ನು ಅಭಿನಂದಿಸುತ್ತಾ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸುವುದರೊಂದಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ವಹಿಸಿದ್ದರು. ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ತುಳಸಿ ಮೇಡಂ ರವರು ಕಲಿಕೋತ್ಸವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು ಹಾಗೂ ನೀರಿನ ಮಿತ ಬಳಕೆ ಮತ್ತು ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆಯೂ ಶಿಕ್ಷಕರು ಮತ್ತು ಮಕ್ಕಳಿಗೆ ಪೋಷಕರಿಗೆ ಮಾಹಿತಿ ನೀಡಿದರು.

IMG-20170214-WA0028ಈ ಸಂದರ್ಭದಲ್ಲಿ ಅನುದಾನಿತ ಶಾಲಾ ಶಿಕ್ಷಕ ಸಂಘದ ಮಂಗಳೂರು ತಾಲೂಕಿನ ಉಪಾಧ್ಯಕ್ಷ ರಾದ ಶ್ರೀ ಎಂ.ಹೆಚ್ ಮಲಾರ್, ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ವೇದಾವತಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ವೀಣಾ ಡೇಸಾ, ಶ್ರೀಮತಿ ಮೋನಿಕಾ ಮಸ್ಕರೇನಸ್,ಸರಕಾರಿ ಉರ್ದು ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಮತಿ ಆಶಾ ಉಪಸ್ಥಿತರಿದ್ದರು. ಉಳ್ಳಾಲ ಶಾಲಾ ಶಿಕ್ಷಕಿ ಪುಷ್ಪಾವತಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ನಳಿನಿ.ಕೆ ವಂದಿಸಿದರು. ಒಂಭತ್ತುಕೆರೆ ಶಾಲಾ ಶಿಕ್ಷಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *