ಉಳ್ಳಾಲ. ಮಂಜನಾಡಿ ಅಸ್ಸಯ್ಯಿದ್ ಇಸ್ಮಾಯೀಲ್ ವಲಿಯುಲ್ಲಾಹಿರವರ ಹೆಸರಿನಲ್ಲಿ ನಡೆಸಿ ಬರುವ ಮಂಜನಾಡಿ ಉರೂಸ್ ಪ್ರಯುಕ್ತ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಲ್-ಬುಖಾರಿ ವಿಶೇಷ ಪುರವಣಿಯನ್ನು ವಾಗ್ಮಿ ಪೆರೋಡ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಮಂಜನಾಡಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವರವಿಗೆ ನೀಡುವ ಮೂಲಕ ಬಿಡುಗಡೆಗೋಳಿಸಿದರು.
ಈ ಸಂದರ್ಭ ಮಂಜನಾಡಿ ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಲಿಕುಂಞ ಪಾರೆ, ಇಬ್ರಾಹೀಂ ಅಹ್ಸನಿ ಮಂಜನಾಡಿ, ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ, ಉಪಾಧ್ಯಕ್ಷರುಗಳಾದ ಮೊೈದಿನ್ ಬಸರ, ಇಸ್ಮಾಯಿಲ್ ದೊಡ್ಡಮನೆ, ಕಾರ್ಯದರ್ಶಿ ಅಝೀಝ್ ಪರ್ತಿಪಾಡಿ, ಕೋಶಾಧಿಕಾರಿ ಕುಂಞಬಾವ ಹಾಜಿ ಕಂಡಿಗ ಉಪಸ್ಥಿತರಿದರು.

