ವಿಟ್ಲ: ಫೆಬ್ರವರಿ 18 : “ ಜೀವನದಲ್ಲಿ ಮುಂದೆ ಬರಲು ನಮ್ಮಲ್ಲಿರುವ ಧೃಢ ಸಂಕಲ್ಪ ಅತೀ ಮುಖ್ಯ” ಎಂದು ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿರುವ ಬಜ್ಪೆಯ ಪನ ಕಾಲೇಜಿನ ಡಾ|| ಎಂ.ಎಸ್. ಕೃಷ್ಣಪ್ರಸಾದ್ ರವರು ಹೇಳಿದರು.
ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ – ರಕ್ಷಕ ಸಂಘದ ಜಂಟಿ ಆಶ್ರಯದಲ್ಲಿ ಶನಿವಾರ ನಡೆದ “10ನೆ ತರಗತಿಯ ನಂತರ ಮುಂದೇನು…..? ಎಂಬ ಮಾಹಿತಿ ,ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ 8 , 9 , 10 ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ “ ಮಾನವನಿಗೆ ಏನನ್ನು ಬೇಕಾದರೂ ಮಾಡುವ ಕಲಿಯುವ ಹಾಗೂ ಸಾಧಿಸುವ ಸಾಮಥ್ರ್ಯವಿದೆ, ಸಾಧನೆಗೆ ಧೃಢ ಸಂಕಲ್ಪ ಅತೀ ಮುಖ್ಯ” ಎಂದು ಅವರು ಮಾರ್ಗದರ್ಶನ ನೀಡಿದರು.
ಶಾಲಾ ಸಂಚಾಲಕರು ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ಪ್ರಹ್ಲಾದ್. ಜೆ. ಶೆಟ್ಟಿಯವರು ಮಾತನಾಡಿ “ ಪೋಷಕರು ಈ ಮಾಹಿತಿ ಕಾರ್ಯಕ್ರಮದ ಉದ್ದೇಶವನ್ನು ಸಫಲಗೊಳಿಸಬೇಕು” ಎಂದರು . ಕಾರ್ಯಕ್ರಮದಲ್ಲಿ ಪನ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರಶಾಂತ್ ಅಲಿಸನ್ ಅವರು “10ನೇ ತರಗತಿಯ ನಂತರ ವಿದ್ಯಾರ್ಥಿಗಳು ಆಯ್ದುಕೊಳ್ಳಬಹುದಾದ ವಿಷಯಗಳ ಬಗ್ಗೆ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಿದರು. ಇವರಿಗೆ ಮಾರ್ಕೆಟಿಂಗ್ ಮ್ಯಾನೇಜರ್ ಅಶ್ವಿನ್ ಹಾಗೂ ಕಂಪ್ಯೂಟರ್ ಶಿಕ್ಷಕರಾದ ಪ್ರಸಾದ್ರವರು ಸಹಕರಿಸಿದರು.ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಕೊಂಬಿಲ ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಸಿ. ಶ್ರೀಧರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ.ಶೆಟ್ಟಿ , ಶಿಕ್ಷಕ – ರಕ್ಷಕ ಸಂಘಧ ಉಪಾಧ್ಯಕ್ಷೆ ಲಕ್ಷ್ಮೀ ಉಪಸ್ಥಿತರಿದ್ದರು. ಶಿಕ್ಷಕ – ರಕ್ಷಕ ಸಂಘಧ ಅಧ್ಯಕ್ಷರಾದ ಕೆ.ಬಾಲಕೃಷ್ಣ ಆಳ್ವ ಸ್ವಾಗತಿಸಿದರು. ಶಿಕ್ಷಕಿಯರಾದ ರೇಶ್ಮಾ ವಂದಿಸಿದರು. ಶಿಕ್ಷಕಿ ಲೀಲಾ ಕಾರ್ಯಕ್ರಮ ನಿರ್ವಹಿಸಿದರು.



