ಒಕ್ಕೆತ್ತೂರು :ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಟ್ಲ ಕ್ಲಸ್ಟರ್ ಮಟ್ಟದ ಕಲಿಕೋತ್ಸವ 2017ರ ಸ್ಪರ್ಧೆಯಲ್ಲಿ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅನೇಕ ವಿದ್ಯಾರ್ಥಿಗಳು ಬಹುಮಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.1ರಿಂದ 8ನೇ ತರಗತಿಯ ಮಕ್ಕಳಿಗೆ ನಡೆದ ಓದು, ಬರಹ, ಅಭಿವ್ಯಕ್ತಿ ಸ್ಪರ್ಧೆಯಲ್ಲಿ 1ನೇ ತರಗತಿ ವೈದೇಹಿ ಪಿ ಎಸ್ ಪ್ರಥಮ, ತ್ರಿಷಾ ಪ್ರಥಮ, 2ನೇ ತರಗತಿಯ ಸೃಷ್ಠಿ ಪ್ರಥಮ, 3ನೇ ತರಗತಿಯ ಭಾಷಿತ ಬಿಕೆ, ದ್ವಿತೀಯ, ಮನೀಷ್ ದ್ವಿತೀಯ, 4ನೇ ತರಗತಿ ಧನ್ಯಶ್ರೀ ಬಿ ಪ್ರಥಮ, ಶಮಂತ್ ಪಿ ಶೆಟ್ಟಿ ದ್ವಿತೀಯ, ಸಮತ ಎಸ್ ಭಟ್ ತೃತೀಯ, 5ನೇ ತರಗತಿ ಮೇಧಾ ನಾಯಕ್ ದ್ವಿತೀಯ, 6ನೇ ತರಗತಿ ಶ್ರಾವ್ಯ ದ್ವಿತೀಯ, ಪ್ರಜ್ಞಾಕುಮಾರಿ ಎಸ್ ದ್ವಿತೀಯ, ಸ್ವಾತಿ ಎಂ ತೃತೀಯ, 7ನೇ ತರಗತಿ ವೈಷ್ಣವಿ ಪಿ ಎಸ್ ದ್ವಿತೀಯ, 8ನೇ ತರಗತಿ ತಸ್ರೀಫಾ ಪ್ರಥಮ ,ತಂಶೀರಾಬಾನು ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.

