ಬಂಟ್ವಾಳ : ಪುರಸಭೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ, ಲಯನ್ಸ್ ಕ್ಲಬ್ ಬಂಟ್ವಾಳ ದ ಸಹಕಾರದೊಂದಿಗೆ ಸ್ವಚ್ಛ ಭಾರತ್ ಮಿಷನ್ ನಡಿ ಸ್ವಚ್ಛತಾ ಜಾಥಾ ಕ್ಕೆ ಲಯನ್ಸ್ ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗಾ ಚಾಲನೆ ನೀಡಿದರು. ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಪುರಸಭಾ ಸದಸ್ಯರಾದ ಪ್ರವೀಣ್ ಬಿ., ಜಗ ದೀಶ ಕುಂದರ್, ಗಂಗಾಧರ್ ಪೂಜಾರಿ, ಪ್ರವೀಣ್ ಕಿಣಿ, ಲೋಕೇಶ್ ಪೂಜಾರಿ, ಮಾಜಿ ಸದಸ್ಯ ಕಾಸಿಂ , ಪುರಸಭಾ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ , ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ, ಮತ್ತಡಿ, ಲಯನ್ಸ್ ಅಧ್ಯಕ್ಷ ಲಕ್ಷ್ಮಣ ಕುಲಾಲ, ಕಾರ್ಯದರ್ಶಿ ಉಮೇಶ್ ಆಚಾರ್, ಶ್ರೀನಿವಾಸ ಪೂಜಾರಿ, ಜಗ ದೀಶ್ ಎಡಪಡಿತ್ತಾಯ, ಜಯಂತ್ ಶೆಟ್ಟ, ಸತ್ಯನಾರಾಯಣ ರಾವ್, ಡೊನಾಲ್ಡ್, ಶಿವಾನಂದ ಬಾಳಿಗಾ, ಸಂಜೀವ ಶೆಟ್ಟಿ, ಪ್ರಶಾಂತ್ ಕೋಟ್ಯಾನ್, ರಾಮಯ್ಯ ಶೆಟ್ಟಿ, ಎಸ್.ಕೆ.ಪಿ.ಎ.ವಲಯಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಕಾರ್ಯದರ್ಶಿ ಹರೀಶ್ ಕುಂದರ್, ಜಿಲ್ಲಾ ಕೋಶಾಧಿಕಾರಿ ದಯಾನಂದ ಬಂಟ್ವಾಳ, ವಿಕೇಶ್, ರಂಜಿತ್, ಮನೋಹರ್ ಹಾಗೂ ಪುರಸಭಾ ಸಿಬ್ಬಂದಿ ವರ್ಗ, ಎಸ್.ವಿ.ಎಸ್.ದೇವಳ ಮತ್ತು ತೌ ಹೀದ್ ಶಾಲೆಯ ವಿದ್ಯಾರ್ಥಿ ವೃಂದ , ಶಿಕ್ಷಕರು ಉಪಸ್ಥಿತರಿದ್ದರು.


