ಫರಂಗಿಪೇಟೆ : ದೇಶ ಪ್ರೇಮಿಗಳ ದಿನಾಚರಣೆ ಯ ಅಂಗ ವಾಗಿ ಫರಂಗಿಪೇಟೆ ಯ ಸನ್ಮಿತ್ರರು ಸೇರಿಕೊಂಡು ಪುದು ಪಂಚಾಯತ್ ನ ಸಫಾಯಿ ಕರ್ಮಚಾರಿ ಮೊಹಮ್ಮದ್ ಕೈಸ್ ರವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಅವರನ್ನು ಸನ್ಮಾನಿಸಲಾಯಿತು . ಪಂಚಾಯತ್ ನವರು ನೀಡುವ ಕನಿಷ್ಠ ವೇತನ ವಾದರೂ ಮೊಹಮ್ಮದ್ ಕೈಸ್ ರವರು ಬೇಸರಿಸದೆ ಪ್ರಾಮಾಣಿಕವಾಗಿ ರಾತ್ರಿ ಹಗಲೆನ್ನದೆ ದುಡಿಯುವ ಪರಿ ಪ್ರಶಂಶನೀಯ . ಮದ್ಯ ರಾತ್ರಿ 12:00 ಗಂಟೆ ವರೆಗೂ ಹಾದಿ ಬೀದಿಯಲ್ಲಿ ಕಸ ಎಸೆಯದಂತೆ ಕಾಯುವ ಕೆಲಸ ಮಾಡುವ ಕೈಸ್ ಫರಂಗಿಪೇಟೆ ಯಲ್ಲಿ ಎಲ್ಲರಿಗು ಪ್ರೀತಿ ಪಾತ್ರರು . ಹಿರಿಯರಾದ ಸುಬ್ರಮಣ್ಯ ರಾವ್ ರವರು ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಿದರು . ಜೊತೆ ಯಲ್ಲಿ ಪಂಚಾಯತ್ ಸದಸ್ಯರುಗಳಾದ ಮನೋಜ್ ಆಚಾರ್ಯ , ಗಣೇಶ್ ದತ್ತನಗರ , ಅಲ್ಲದೆ ಊರ ಗಣ್ಯರುಗಳಾದ ದಿನೇಶ್ ಆರ್ ಶೆಟ್ಟಿ , ಎಂ ಕೆ ಅಶ್ರಫ್ ಫರಂಗಿಪೇಟೆ , ಹನೀಫ್ ಅಮೆಮಾರ್ , ಇಕ್ಬಾಲ್ ಅಮೆಮಾರ್ , ವಿಕ್ರಂ ಬರ್ಕೆ ಮತ್ತಿತರರು ಉಪಸ್ಥಿತರಿದ್ದರು

