ಉಳ್ಳಾಲ : ಆರು ದಶಕಗಳ ಕಾಲ. ತಾಜುಲ್ ಉಲಮಾರವರೊಂದಿಗೆ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿಯೂ ತಾಜುಲ್ ಉಲಮಾ ರ ವಫಾತಿನ ನಂತರ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿ ಸಹಸ್ರಾರು ಮದನಿ ವಿದ್ವಾಂಸರನ್ನು ಸಮಾಜಕ್ಕೆ ಅರ್ಪಿಸಿದ ಅಗ್ರಗಣ್ಯ ಮತಪಂಡಿತರಾದ ತಾಝೆಕ್ಕೋಡ್ ಉಸ್ತಾದರಿಗೆ ಇಂದು ಮದನೀಸ್ ಅಸೋಸಿಯೇಷನ್ ಕೇಂದ್ರ ಸಮಿತಿಯ ವತಿಯಿಂದ ಕೇರಳದ ತಾಝೆಕ್ಕೋಡ್ ಎಂಬಲ್ಲಿ ಕ್ಯಾಶ್ ಅವಾರ್ಡ್ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. ಬಹುಮಾನ್ಯರಾದ ಶೈಖುನಾ ತಾಝೆಕ್ಕೋಡ್ ಉಸ್ತಾದ್ ದುಆಕ್ಕೆ ನೇತೃತ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದನೀಸ್ ಕೇಂದ್ರ ಸಮಿತಿಯ ಉಪಾಧ್ಯಕ್ಷ ನೆಕ್ಕಿಲಾಡಿ ಅಲ್ ಹಾಜ್ ಇಸ್ಮಾಯಿಲ್ ಮದನಿಯವರು ವಹಿಸಿದ್ದರು. ಕಾರ್ಯಕ್ರಮವನ್ನು ಸಯ್ಯಿದ್ ಅಬ್ದುಸ್ಸಲಾಂ ತಂಙ್ಙಳ್ ಉದ್ಛಾಟಿಸಿದರು. ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿಯವರು ಸ್ವಾಗತಿಸಿ ಕೊನೆಯಲ್ಲಿ ಕೆ.ಎಂ.ಮದನಿ ಕಟ್ಟತ್ತಿಲ ವಂದಿಸಿದರು. ಆಲಂಪಾಡಿ ಅಕ್ಬರ್ ಅಲೀ ಮದನಿ ನಿರೂಪಿಸಿದರು.

IMG-20170211-WA0026

IMG-20170211-WA0027
ವೇದಿಕೆಯಲ್ಲಿ ಪಿ.ಕೆ.ಮುಹಮ್ಮದ್ ಮದನಿ, ಸಾಮಣಿಗೆ ಮದನಿ, ಪಳ್ಳಿತ್ತಡ್ಕ ಅಬ್ದುಲ್ ಖಾದಿರ್ ಮದನಿ, ಸೆರ್ಕಳ ಅಲೀ ಮದನಿ, ಮರ್ಸಿನ್ ಮುಹಮ್ಮದ್ ಮದನಿ, ದಾರುಲ್ ಇಝ್ಝ ಸಿನಾನ್ ಮದನಿ, ಎನ್.ಡಿ.ಅಬೂಬಕರ್ ಮದನಿ, ಡಿ.ಎಸ್. ಅಬ್ದುರ್ರಹ್ಮಾನ್ ಮದನಿ, ನಾಸಿರ್ ಮದನಿ ಕಾಟಿಪಳ್ಳ, ಇಸ್ಮಾಯಿಲ್ ಮದನಿ ಕೊಯ್ಯೂರು, ಹೈದರ್ ಮದನಿ ಸೂರಿಂಜೆ, ಉಮರ್ ಮದನಿ ಪೊಯ್ಯತ್ತಬೈಲ್, ಖಾಲಿದ್ ಮದನಿ ಕಲ್ಮಿಂಜೆ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *