ಬಜಪೆ:ಕಿಲೆಂಜಾರು ದ.ಕ.ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಕಿಲೆಂಜಾರು ಇಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನಡೆಸಲಾಗುವ ದಡಾರ-ರುಬೆಲ್ಲಾ ಲಸಿಕಾ ಅಭಿಯಾನವನ್ನು ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಮಹಮ್ಮದ್ ಶರೀಫ್ ಬಿಕ್ಕೋಡ್ ಇವರು ಶಾಲಾ ಮುಖ್ಯಗುರುಗಳಾದ ಯತಿರಾಜ್ ಕೆ.ಹಾಗೂ ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜ್ಯೋತಿ ಇವರ ಸಮಕ್ಷಮದಲ್ಲಿ ಫೆ.8 ಬುಧವಾರ ಉದ್ಘಾಟಿಸಿದರು, ಸಮಿತಿಯ ಸದಸ್ಯರುಗಳಾದ ಅಬ್ದುಲ್ ಅಝೀಝ್, ಸುಲೈಮಾನ್, ಜಯಶ್ರೀ, ನಳಿನಾಕ್ಷಿ ಹಾಗೂ ಶೇಕ್ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ಕುಪ್ಪೆಪದವು ಇಲ್ಲಿನ ಆರೋಗ್ಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳಿಗೆ ಲಸಿಕೆಯನ್ನು ನೀಡಿದರು. ಪೋಷಕ ಸಮೂಹ ಹಾಗೂ ಶಿಕ್ಷಕ ವೃಂದ ಅಭಿಯಾನದ ಯಶಸ್ಸಿಗೆ ಸಹಕಾರವನ್ನು ನೀಡಿದರು.

IMG-20170208-WA0015

By suddi9

Leave a Reply

Your email address will not be published. Required fields are marked *