ಬಂಟ್ವಾಳ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ಕಡೇಶ್ವಾಲ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ ಚಂದ್ರಶೇಖರ ಪೂಜಾರಿ ಕೋರ್ಯ ಇವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಶನಿವಾರ ಮೆಲ್ಕಾರ್‍ನಲ್ಲಿ ಸನ್ಮಾನಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬೂಡ ನಿಕಟಪೂರ್ವ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯರಾದ ಗಾಯತ್ರಿ ರವೀಂದ್ರ ಸಪಲ್ಯ, ಕೆ.ಸಂಜೀವ ಪೂಜಾರಿ, ಎಪಿಎಂಸಿ ನೂತನ ಸದಸ್ಯರಾದ ಕೆ.ಪದ್ಮನಾಭ ರೈ, ಎಂ.ಪದ್ಮರಾಜ ಬಲ್ಲಾಳ್, ಚಂದ್ರಶೇಖರ ರೈ, ವಕೀಲ ಚಿದಾನಂದ ಕಡೇಶ್ಯಾಲ್ಯ ಮತ್ತಿತರರು ಇದ್ದರು. ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು ಸ್ವಾಗತಿಸಿ, ವಂದಿಸಿದರು.

8btl-Narikombu

By Suddi9

Leave a Reply

Your email address will not be published. Required fields are marked *