ಅರ್ಕುಳ  : ಶ್ರೀ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಇದಕ್ಕೆ ಶತಮಾನೋತ್ಸವ ದ ಸಂಭ್ರಮ , ನೂರು ವರ್ಷ ಪೂರೈಸುವ ಈ ಸಂದರ್ಭ ದಲ್ಲಿ ಸವಿ ನೆನಪಿಗೆ ವಿಶೇಷ ವಾದ ಲಾಂಛನ ವನ್ನು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ರಮಾನಾಥ್ ರೈ ಯವರು ಬಿಡುಗಡೆ ಗೊಳಿಸಿದರು . ಈ ಸಂದರ್ಭ ದಲ್ಲಿ ಮಾತನಾಡಿದ ಅವರು ಕನ್ನಡ ಮಾಧ್ಯಮದಲ್ಲಿ ಕಲಿಸುತ್ತಿರುವ ಖಾಸಗಿ , ಅನುದಾನಿತ ಶಾಲೆ ಗಳಲ್ಲಿ ಪ್ರೌಢ ಶಾಲೆ ತರಗತಿ ಗಳನ್ನ ತೆರೆಯಲು ಸರ್ವ ಶಿಕ್ಷಾ ಅಭಿಯಾನ ದ ಅಡಿಯಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು ಆಮೇಲೆ ಮಾತನಾಡಿದ ಸ್ಥಳೀಯ ಶಾಸಕ ಬಿ ಎ ಮೊಯಿದ್ದೀನ್ ಬಾವ ರವರು ಕನ್ನಡ ಮಾಧ್ಯಮ ಶಾಲೆ ಗಳಿಗೆ ಇನ್ನು ಹೆಚ್ಚಿನ ಸೌಕರ್ಯ ಗಳನ್ನು ಒದಗಿಸಿ ಉತ್ತಮ ಶಿಕ್ಷಣ ನೀಡುವಲ್ಲಿ ಸರಕಾರ ದೊಂದಿಗೆ ಮನವಿ ಮಾಡುವ ಭರವಸೆ ನೀಡಿದರು.

sri raama ವೇದಿಕೆಯಲ್ಲಿ ಶಾಲಾ ಆಡಳಿತಮಂಡಳಿ ಸದಸ್ಯ ರಾದ ಮಂಜುನಾಥ್ ಶೆಣೈ , ಕೃಷ್ಣ ಕುಮಾರ ಪೂಂಜಾ , ತಾಲೂಕ ಪಂಚಾಯತ್ ಸದಸ್ಯ ಅಬ್ದುಲ್ ಸಮದ್ , ಗ್ರಾಮ ಪಂಚಾಯತ್ ಸದಸ್ಯರು ಗಳಾದ ಸುಕುಮಾರ್ , ಜಯಶ್ರೀ ಭಂಡಾರಿ , ಶತಮಾನೋತ್ಸವ ಸಮಿತಿ ಪದಾಧಿಕಾರಿ ಗಳಾದ ಮೊಹಮ್ಮದ್ ಯೂಸುಫ್ , ರಾಮದಾಸ್ ಕೋಟ್ಯಾನ್ ಮಜಿ , ಸುಂದರ ಶೆಟ್ಟಿ ಕಲ್ಲ ತಡಮೆ , ವಿಶ್ವನಾಥ್ ಶೆಟ್ಟಿ ಕೊಟ್ಟಿಂಜ, ದಾಮೋದರ ಶೆಣೈ , ಚಂದ್ರ ಶೇಖರ ಗಾಂಭೀರ , ರಾಧಾಕೃಷ್ಣ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು ಶಾಲಾ ಸಂಚಾಲಕರಾದ ಗೋವಿಂದ ಶೆಣೈ ಸ್ವಾಗತಿಸಿದರು , ಶಾಲಾ ಹಳೆವಿದ್ಯಾರ್ಥಿ ಸಂಘ ದ ಅಧ್ಯಕ್ಷ ಹಾಗು ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಎ ಕೆ ಜಯರಾಮ ಶೇಖ ಪ್ರಾಸ್ತಾವಿಕ ಭಾಷಣ ಮಾಡಿದರು , ದಿನಕರ ಕರ್ಕೇರ ಮಂಟಮೆ ವಂದಿಸಿದರು , ಮುಖ್ಯೋಪಾಧ್ಯಾಯರಾದ ದೇವದಾಸ್ ಕೆ ಆರ್ ಕಾರ್ಯಕ್ರಮ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *