ಉಳ್ಳಾಲ: ಹಝ್ರತ್ ಅಸ್ಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿರವರ ಉರೂಸ್ ಮುಬಾರಕ್ ಕಾರ್ಯಕ್ರಮ ಫೆ,9ರಿಂದ 18ವರೆಗೆ ನಡೆಯಲಿದ್ದು ಶುಕ್ರವಾರ ಅಸ್ಸಯ್ಯದ್ ಜಾಫರ್ ಸ್ವಾಧಿಕ್ ತಂಙಳ್ ಕುಂಬೋಳ್ ಧ್ವಜಾರೋಹಣಗೈದು ಮಂಜನಾಡಿ ಉರೂಸ್‍ಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಇತಿಹಾಸ ಪ್ರಸಿದ್ದಿಯಾದ ಮಂಜನಾಡಿ ಉರೂಸ್. ಸರ್ವ ಧರ್ಮಗಳ ಅಶಾ ಕೇಂದ್ರವಾಗಿ ಬೆಳೆದಿದ್ದು ದಿನನಿತ್ಯ ಮಂಜನಾಡಿ ಮಕ್ಬರಕ್ಕೆ ಸರ್ವ ಧರ್ಮಿಯ ಸಾವಿರ ಸಂಖ್ಯೆಯಲ್ಲಿ ಝಿಯಾರತ್‍ಗೆ ಬರುತ್ತಿದ್ದು ಅವರ ಕಷ್ಟ ಕಾರ್ಪನ್ಯಗಳಿಗೆ ಪರಿಹಾರ ಪಡೆದ ಉದಾಹರಣೆಗಳಿವೆ ಇಂತಹ ಮಹಾನ್ ಚೈತನ್ಯವನ್ನು ಸ್ಮರಿಸುವುದು ಮತ್ತು ಮಂಜನಾಡಿ ಉರೂಸ್ ಯಶಸ್ವಿಗೋಳಿಸುದು ನಮ್ಮೆಲ್ಲರ ಅದ್ಯ ಕರ್ತವ್ಯ ಎಂದು ಹೇಳಿದರು.

ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ, ಮಾಜಿ ಅಧ್ಯಕ್ಷ ಅಲಿಕುಂಞ ಪಾರೆ, ಪ್ರ. ಕಾರ್ಯದರ್ಶಿ ಅಬ್ದುಲ್ ಅಝೀಝ್ ಪರ್ತಿಪಾಡಿ, ಮಾಜಿ ತಾ.ಪಂ ಸದಸ್ಯ ಎನ್.ಎಸ್ ಕರೀಂ, ಮಂಜನಾಡಿ ಜಮಾಅತ್ ಉಪಾಧ್ಯಕ್ಷ ಹಾಜಿ ಮೊೈದೀನ್ ಬಸರ, ಕೋಶಾಧಿಕಾರಿಕುಂಞ ಬಾವ ಹಾಜಿ ಕಲ್ಕಟ್ಟ, ಜೋತೆ ಕಾರ್ಯದರ್ಶಿಗಳಾದ ಕೆ.ಎಂ.ಕೆ ಮಂಜನಾಡಿ, ಮಂಗಳಾಂತಿ ಬಾವು, ಆರ್ಥಿಕ ಸಮಿತಿ ಸದಸ್ಯರಾದ ಇಬ್ರಾಹೀಂ ಮೈಸೂರು, ಬಶೀರ್ ಮಂಜನಾಡಿ, ಅಶ್ರಫ್ ಎಡಂಬಲೆ ಈ ಸಂದರ್ಭ ಉಪಸ್ಥಿತರಿದರು.

