ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ಬಿ.ಆರ್. ಕಬಕ ಬಳಗದಿಂದ ಕಟ್ಟಿದ ತುಳುವ ಚಾವಡಿ ದಾಸಕೋಡಿ ಸಂಸ್ಥೆ 25ನೇ ವರ್ಷಕ್ಕೆ ಕಾಲಿರಿಸಿದೆ. ತುಳುವ ಚಾವಡಿಯ ಮುಖಾಂತರ ಈಗಾಗಲೇ 24 ತುಳು ನಾಟಕವನ್ನು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಿ ಪ್ರೇಕ್ಷಕರಿಂದ ನಾಟಕಾಭಿಮಾನಿಗಳಿಂದ ಮೆಚ್ಚುಗೆ ಗಳಿಸಿದೆ. ತುಳು ಹಾಗೂ ಕನ್ನಡ ಭಾಷೆಯಲ್ಲಿ ಕವಿಗೋಷ್ಠಿ ಕಥಾಗೋಷ್ಠಿಗಳನ್ನು ನಡೆಸಿ ಯುವ ಕವಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ತಾಲೂಕು ಮಟ್ಟದ ಕವನ ರಚನೆ ಹಾಗೂ ಕಥಾ ರಚನೆ ಸ್ಫರ್ಧೆಗಳನ್ನು ಏರ್ಪಡಿಸಿದೆ.ರಘು ಇಡ್ಕಿದು , ಗಣೇಶ್ ಪ್ರಸಾದ ಪಾಂಡೇಲು ಮೊದಲಾದ ಕವಿಗಳು ಸಾಹಿತಿಗಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಿದೆ.
ಪ್ರಾರಂಭದಲ್ಲಿ ಸಾಮಾಜಿಕ ಚಟುವಟಿಕೆಗಳ ಮೂಲಕ ಚಾವಡಿ ಕಾರ್ಯನಿರ್ವಹಿಸಿದ್ದು, ಬಾಳ್ತಿಲ ಗ್ರಾಮದ ಅಂಗನವಾಡಿÉಗಳಿಗೆ ಬೆಂಚು ,ಸಮವಸ್ತ್ರ ಪುÀಸ್ತಕ ಹಾಗೂ ಪೀಠೋಪರಕರಣಗಳನ್ನು ನೀಡಿ ಸಹಕರಿಸಿದೆ. ತುಳು ಹಾಗೂ ಕನ್ನಡ ಚುಟುಕು ಸ್ಪರ್ಧೆಗಳನ್ನು ಏರ್ಪಡಿಸಿ ಕೃತಿಗಳನ್ನು ಪ್ರಕಟಿಸಿದೆ. ಬಿ.ಆರ್.ಕಬಕರವರ “ಕಡಲ ಮುತ್ತು ಹನಿಗವನ” ಬಿಡುಗಡೆಯಾಗಿದೆ. ಮಂಗಳೂರು ಆಕಾಶವಾಣಿಯಲ್ಲಿ ಗುಡ್ಡೆಗ್ ಗುಡ್ಡೆ ಅಡ್ಡ, ಪೇರ್‍ಗೆ ಪುಳಿ ಪುಂಟಡೆ, ಕಲ್ಲ್ ಕಡ್ಪುನ ಜವನೆರ್ನ ಸಂದರ್ಶನ ಪ್ರಸಾರಗೊಂಡಿದೆ. ಮಂಗಳೂರು ಪುರಸಭವನದಲ್ಲಿ “”ಜಾತಿ ದಾಯೆ”,”ಪುರ್ಸೊತ್ತಿಜ್ಜಿ”, ನಾಟಕ, ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆಗ ಪಾತ್ರವಾಗಿ ಜಿಲ್ಲೆಯಾದ್ಯಂತ ಹಲವು ಯಶಸ್ವಿ ಪ್ರದರ್ಶನಗಳನ್ನು ನೀಡಿದೆ. ್ಲ “ಕಣ್‍ದಾಂತಿ ಪೊಣ್ಣು” ್ಲ ‘ಪುರ್ಸೊತುಂಡಾ’- ಪುತ್ತೂರು ಪುರಸಭಾಭವ£ದಲ್ಲಿ ಪ್ರದರ್ಶನಗೊಂಡಿತ್ತು .ಹಲವು ನಾಟಕ ಕಾಲವಿದರಿಗೆ ವೇದಿಕೆಯನ್ನು ಒದಗಿಸಿದೆ.
ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಬಿ.ಆರ್. ಕಬಕರ 26 ನೇ ಕಲಾಕೃತಿ “ಬಂಗಾರ್ದ ಬಳ್” ನಾಟಕ ಪ್ರದರ್ಶನ ಕಾಣಲಿದೆ. 6 ಜನ ಸದಸ್ಯರೊಂದಿಗೆ ಹುಟ್ಟಿಕೊಂಡ ತುಳುವ ಚಾವಡಿ ದಾಸಕೊಡಿಯ ಸ್ಥಾಪಕ ಅಧ್ಯಕ್ಷ ಬಿ.ಆರ್.ಕಬಕ ನೇತೃತ್ವದಲ್ಲಿ 25 ವರುಷಗಳಿಂದ ಚಾವಡಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು , ಊರಿನ ಪರವೂರಿನ ತುಳುವರು ಪ್ರೋತ್ಸಾಹಿಸಿದ್ದಾರೆ.
ಕಲೆಯೇ ಜೀವನವೆಂಬಂತೆ ಹಳ್ಳಿ ಪ್ರದೇಶದ ಪ್ರತಿಭಾವಂತರನ್ನು ಗುರುತಿಸಿಹಲವಾರು ನಾಟಕಗಳನ್ನು ಪ್ರದರ್ಶಿಸಲಾಗಿದೆ. ಲೇಖಕ ಹಾ.ಮ. ಸತೀಶ್‍ರವರ ಸಾಹಿತ್ಯವು ಇದರಲ್ಲಿ ಬಹುಪಾಲಿದೆ. ಸಾಕ್ಷರತೆಯಲ್ಲಿ ಕಲಿತವರಿಗೆ ನಾಟಕ ಅಭ್ಯಾಸ ಮಾಡಿಸಿ, ಕಣ್‍ದಾಂತಿ ಪೊಣ್ಣು ನಾಟಕ 36 ಪ್ರಯೋಗಳನ್ನು ಕಂಡಿದೆ 24 ವರುಷದಲ್ಲಿ 100 ಕ್ಕೂ ಹೆಚ್ಚು ಕಲಾವಿದರು ಹಾಗೂ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಗಿದೆ. ಮುಂದಿನ ವರುಷಗಳಲ್ಲಿ ಸಾಮೂಹಿಕ ವಿವಾಹ ಸೇರಿದಂತೆ ಹಲವು ತುಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ತುಳುವ ಚಾವಡಿಗಿದೆ. ಫೆ.4 ರಂದು ಬಾಳ್ತಿಲ ದಾಸಕೋಡಿ ಹಳೆಗ್ರಾಮ ಪಂಚಾಯತ್ ವಠಾರದಲ್ಲಿ ಬೆಳ್ಳಿ ಹಬ್ಬದ ಸಂಭ್ರಮ ಕಾರ್ಯಕ್ರಮ ಹಾಗೂ ಚಾವಡಿ ಕಲಾವಿದರಿಂದ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದೆ.

By Suddi9

Leave a Reply

Your email address will not be published. Required fields are marked *