ಬಂಟ್ವಾಳ : ಶಾಂತಿ-ಸೌಹಾರ್ದತೆಯ ಬದುಕು ರೂಪಿಸುವಲ್ಲಿ ಕ್ರೀಡಾಕೂಟಗಳ ಪಾತ್ರ ಮಹತ್ತರವಾದದು ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಕಲ್ಲಡ್ಕದ ಝಮಾನ್ ಬಾಯ್ಸ್ ದಶಮಾನೋತ್ಸವದ ಪ್ರಯುಕ್ತ ಕಲ್ಲಡ್ಕ ಶಾಲಾ ಮೈದಾನದಲ್ಲಿ 4 ದಿವಸಗಳ ಕಾಲ ನಡೆದ ಕಲ್ಲಡ್ಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ “ಕೆಪಿಎಲ್ ಟ್ರೋಫಿ-2017” ಇದರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸೌಹಾರ್ದತಯುತ ಬದುಕಿಗೆ ಪೂರಕವಾದ ಅಂಶವನ್ನು ತನ್ನ ದೈನಂದಿನ ಜೀವನ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಾಂತ-ಸೌಹಾರ್ದತೆ ಉಳಿಯಲು ಸಾಧ್ಯ ಹೊರತು ಕೇವಲ ಭಾಷಣದಿಂದ ಅಲ್ಲ ಎಂದವರು ಅಭಿಪ್ರಾಯಪಟ್ಟರು.

ಪಂದ್ಯಾಟವನ್ನು ವಿಟ್ಲದ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಉದ್ಘಾಟಿಸಿದರು. ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಎಪಿಎಂಸಿ ಸದಸ್ಯ ಕೆ. ಪದ್ಮನಾಭ ರೈ, ಹಜಾಜ್ ಸಮೂಹ ಸಂಸ್ಥೆಯ ಪಾಲುದಾರ ಹಾಜಿ ಜಿ. ಯೂಸುಫ್ ಗೋಳ್ತಮಜಲು, ಉದ್ಯಮಿಗಳಾದ ಜಯಾನಂದ ಆಚಾರ್ಯ, ಹಮೀಲ್ ಮಿಲಾದ್, ಹಮೀದ್ ಮಲ್ಪೆ, ಪತ್ರಕರ್ತ ಲತೀಫ್ ನೇರಳಕಟ್ಟೆ, ಎಸ್‍ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಸಿದ್ದೀಕ್, ಶಾಫಿ ಐ.ಎನ್. ಕಲ್ಲಡ್ಕ, ಇಬ್ರಾಹಿಂ ಉಂಞಕ, ಇಬ್ರಾಹಿಂ ಐ.ಎನ್. ಕಲ್ಲಡ್ಕ, ಇಸಾಕ್ ಐ.ಎನ್., ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ನೆಟ್ಲ, ಕೆಪಿಎಲ್ ತಂಡದ ಮಾಲಕರುಗಳಾದ ಕಾಸಿಂ ಶಾಂತಿಅಂಗಡಿ, ಜಿ.ಎಸ್. ಸಿದ್ದೀಕ್ ಮುರಬೈಲು, ಅಶ್ರಫ್ ಅಮ್ಟೂರು, ಮುನಾಝ್ ಮೋನ್ಝಾ, ಜಾಫರ್ ಅವಾಕ್ ಕಲ್ಲಡ್ಕ, ಸಂಶುದ್ದೀನ್ ಸನ್‍ಲೈಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಝಮಾನ್ ಬಾಯ್ಸ್ ಸ್ಥಾಪಕರಾದ ನಾಸಿರ್ ಸೂರಜ್, ಸಜ್ಜಾದ್ ಕೆ.ಸಿ.ರೋಡು, ಪ್ರಮುಖರಾದ ಅಬ್ದುರ್ರಹ್ಮಾನ್ ಅದ್ದು ಕಲ್ಲಡ್ಕ, ನಝೀರ್ ಕುಣಿಗಲ್, ಕೆ.ಕೆ. ಶಹೀದ್, ಇಕ್ಬಾಲ್ ಕ್ಯಾಂಬಲ್, ರಶೀದ್ ಬಾಬ, ತೌಫೀಕ್ ಕಲ್ಲಡ್ಕ, ಹರೀಶ ಕಲ್ಲಡ್ಕ, ಫಯಾಝ್ ಮಾಣಿಮಜಲು, ಫಾರೂಕ್ ಬಲ್ಲೆಕೋಡಿ, ಶಮೀಝ್ ಮಾಣಿಮಜಲು, ರಝಾಕ್ ರಾಝ್, ನಝೀರ್ ಬಲ್ಲೆಕೋಡಿ, ಅಝರ್ ಮಿಲಾದ್, ಅಝೀಂ ಕಲ್ಲಡ್ಕ, ಅಝರ್ ಕಲ್ಲಡ್ಕ, ಫವಾಝ್ ಮಾಸ್ಟರ್ಸ್, ಜುನೈದ್ ಕಲ್ಲಡ್ಕ, ಅಶ್ಫರ್ ಅಮ್ಟೂರು ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ವಿಶಿಷ್ಟ ವಸ್ತು ಸಂಗ್ರಾಹಕ ಕೆ. ಮುಹಮ್ಮದ್ ಯಾಸಿರ್ ಕಲ್ಲಡ್ಕ ಹಾಗೂ ರಕ್ತದಾನಿ ಹಕೀಂ ಕಲ್ಲಡ್ಕ ಅವರನ್ನು ಸನ್ಮಾನಿಸಲಾಯಿತು. ಕಲ್ಲಡ್ಕ ಮೇಲಿನಪೇಟೆಯಿಂದ ಶಾಲಾ ಮೈದಾನದ ತನಕ ಕೆಪಿಎಲ್ ಟ್ರೋಫಿ, ಪ್ರದರ್ಶನದ ಆಕರ್ಷಕ ಮೆರವಣಿಗೆ ನಡೆಯಿತು. ಕಲ್ಲಡ್ಕ ಝಮಾನ್ ಬಾಯ್ಸ್ ಅಧ್ಯಕ್ಷ ಮನ್ಸೂರ್ ಸೂರಜ್ ಸ್ವಾಗತಿಸಿ, ನಝೀರ್ ಕುಕ್ಕಾಜೆ ವಂದಿಸಿದರು. ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಅಮ್ಟೂರು ವಾರಿಯರ್ಸ್‍ಗೆ ಪ್ರಶಸ್ತಿ
8 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಅಶ್ರಫ್ ಅಮ್ಟೂರು ಮಾಲಕತ್ವದ ಅಮ್ಟೂರು ವಾರಿಯರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಜಿ.ಎಸ್. ಸಿದ್ದೀಕ್ ಕಲ್ಲಡ್ಕ ಮಾಲಕತ್ವದ ಮುರಬೈಲ್ ಟೈಗರ್ಸ್ ತಂಡವು ರನ್ನರ್ಸ್ ಪ್ರಶಸ್ತಿಗೆ ಪಾತ್ರವಾಯಿತು.
ಸರಣಿ ಶ್ರೇಷ್ಠ ಪ್ರಶಸ್ತಿ ರಶೀದ್ ಬಾಬ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಅಶ್ಫರ್ ಅಮ್ಟೂರು, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಜುನೈದ್ ಹಾಗೂ ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಹರೀಶ ಕಲ್ಲಡ್ಕ ತಮ್ಮದಾಗಿಸಿಕೊಂಡರು.
ಹಾರೂನ್ ಮಾಣಿ ಹಾಗೂ ಹೈದರ್ ಸುರಿಬೈಲು ತೀರ್ಪುಗಾರರಾಗಿ ಸಹಕರಿಸಿದರು
