ಕಲ್ಲಡ್ಕ: ಕಳೆದ 25 ವರ್ಷಗಳಿಂದ ತುಳು ಭಾಷೆ, ಸಂಸ್ಕøತಿ, ನಾಟಕ ರಂಗಗಳಲ್ಲಿ ಸೇವೆ ಸಲ್ಲಿಸಿರುವ ತುಳುವ ಚಾವಡಿ ದಾಸಕೋಡಿ ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಕಲ್ಲಡ್ಕ ಸಮೀಪದ ಬಾಳ್ತಿಲ ದಾಸಕೋಡಿ ಹಳೆಗ್ರಾಮ ಪಂಚಾಯತ್ ವಠಾರದಲ್ಲಿ ಫ.4 ರಂದು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಬಿ.ಆರ್. ಕಬಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ,ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅಥಿತಿಗಳಾಗಿ ರಾಜೆಶ್ ನಾಯ್ಕ್ ಉಳಿಪಾಡಿ ಗುತ್ತು , ಜಿತೇಂದ್ರ ಎಸ್ ಕೊಟ್ಟಾರಿ , ಸುಕುಮಾರ್ ಬಂಟ್ವಾಳ , ಜಯಾನಂದ ಪೆರಾಜೆ, ತೋಟ ಕೃಷ್ಣಪ್ಪ ಪೂಜಾರಿ ಮೊದಲಾದವರು ಭಾಗವಹಿಸಲ್ಲಿದ್ದಾರೆ .ಇದೇ ಸಂದರ್ಭದಲ್ಲಿ ಶಾಮ್ ಜಾದೂಗಾರ್ ಬಳಗದವರಿಂದ ಮಾಯಾಲೋಕ, ಬಿ ಆರ್ ಕಬಕ ಇವರ 26ನೇ ಕೃತಿ ಬಂಗಾರ್‍ದ ಬಳೆ ತುಳು ಹಾಸ್ಯ ನಾಟಕ ಮಾಹಬಲ ದಾಸಕೋಡಿ ನಿರ್ದೇಶನದಲ್ಲಿ ನಡೆಯಲಿದೆ. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.

By suddi9

Leave a Reply

Your email address will not be published. Required fields are marked *