ಉಡುಪಿ:- ಪರ್ಕಳದಂತಹ ಗ್ರಾಮೀಣ ಪ್ರದೇಶದಲ್ಲಿ ಕೇವಲ ವ್ಯಕ್ತಿತ್ವ ವಿಕಸ ಕೆಲಸಮಾಡದೆ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾಡುತ್ತಿರುವುದಕ್ಕೆ ಜೇಸಿಐ ಪರ್ಕಳ ಘಟಕ ಅಭಿನಂದನಾರ್ಹ ಎಂದು ಜೇಸಿಐ 15 ವಲಯಾಧ್ಯಕ್ಷ ಸಂತೋಷ್ ಜಿ ಹೇಳಿದರು. ಅವರು ಜನವರಿ 31 ರಂದು ಪರ್ಕಳದ ವಿಘ್ನೇಶ್ವ ಸಭಾಭವನದಲ್ಲಿ ಜೇಸಿಐ ಪರ್ಕಳದ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ದಶಮಾನೋತ್ಸವ ಪೂಜೆಯ ಕಾರ್ಯಕ್ರಮದ ಸಭೆಯಲ್ಲಿ ಮಾತನಾಡಿದರು.ಅತ್ಯುತ್ತಮ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ಮೂಲಕ ಜೇಸಿಯ ಪರಿಚಯವನ್ನು ಪರ್ಕಳ ಜೇಸಿಯವರು ಮಾಡಿರುವುದು ಸ್ತುತ್ಯರ್ಯ ಎಂದರು.DSC_6039

ದಶಮಾನೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿಲೀಪ್ ರಾಜ್ ಹೆಗ್ಡೆ, ಡಾ|| ಪಿ.ವಿ ಭಂಡಾರಿ, ಜಿಬು ಥಾಮಸ್, ಸೈನಿಕರಾದ ಕೃಷ್ಣಪ್ಪ, ವ್ಯಾಪಾರಿಗಳಾದ ಸಾಧು ಪೂಜಾರಿ, ಕೃಷಿಕ ಹರೀಶ್ಚಂದ್ರ ಪೂಜಾರಿ, ಅನಿಲ ಜಾಡಿ ವಿತರಕ ನಾರಾಯಣ ನಾಯ್ಕ, ಎಸ್.ಬಿ.ಐ ಬ್ಯಾಂಕಿನ ಪರ್ಕಳ ಶಾಖಾ ಪ್ರಬಂಧಕ ಮುರಳೀಧರ ಎನ್ ಪ್ರಭು, ಅಟೋ ಚಾಲಕರಾದ ಅಬುಬಕ್ಕರ್ ಮತ್ತು ಪುರೋಹಿತರಾದ ವೆಂಕಟಾಚಲ ಭಟ್ ಇವರುಗಳನ್ನು ಸನ್ಮಾನಿಸಲಾಯಿತು.
ಕಿಡ್ನಿ ವೈಫಲ್ಯ ಹೊಂದಿದ ದಯಾನಂದ ಕುಲಾಲ್‍ರಿಗೆ ನೀಡಿದ ಸಹಾಯ ಧನವನ್ನು ಜೇಸಿಐ ರಾಷ್ಟೀಯ ಸಂಯೋಜಕಿ ರೂಪಶ್ರೀ ರತ್ನಾಕರ ಇಂದ್ರಾಳಿಯವರು ಹಸ್ತಾಂತರಿಸಿದರು.

DSC_5904
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರ್ಕಳ ಜೇಸಿಯ ಅಧ್ಯಕ್ಷೆ ಆಶಾ ಬಾಬು ವಹಿಸಿದ್ದರು. ವೇದಿಕೆಯಲ್ಲಿ ರಾಷ್ಟಪ್ರಶಸ್ತಿ ಪುರಸ್ಕತ ನಿವೃತ್ತ ಶಿಕ್ಷಕ ನೆಂಪು ನರಸಿಂಹ ಭಟ್, ವಲಯ ಉಪಾಧ್ಯಕ್ಷ ಮರಿಯಪ್ಪ, ವಲಯ ಕಾರ್ಯಕ್ರಮ ವಿಭಾಗದ ನಿರ್ದೇಶಕ ಅನಿಲ್ ಕುಮಾರ್, ಸ್ಥಾಪಕಾಧ್ಯಕ್ಷ ಅಚ್ಯುತ ನಾಯ್ಕ, ಕಾರ್ಯಕ್ರಮ ನಿರ್ದೇಶಕ ಹರೀಶ್ ಸಾಮಂತ್, ಜೇಸಿರೆಟ್ ಅದ್ಯಕ್ಷೆ ಸುಷ್ಮಾ ಮರಿಯಪ್ಪ, ಯುವ ಜೇಸಿ ಅಧ್ಯಕ್ಷ ಸ್ವರಾಜ್ ಶೆಟ್ಟಿ, ವಲಯಾಧಿಕಾರಿಗಳಾದ ರಾಜೇಶ್ ಡಿ. ಶೆಣ್ಯೆ, ಮನೋಜ್ ಕಡಬ ಮುಂತಾದವರು ಉಪಸ್ಥಿತರಿದ್ದರು.ಕಾರ್ಯದರ್ಶಿ ಸುಧಾಕರ ಪಾಜಾರಿ ವಂದಿಸಿದರು.DSC_5937

By Suddi9

Leave a Reply

Your email address will not be published. Required fields are marked *