ಮುಂಬಯಿ, ಜ. 31: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದೇಶದ 68ನೇ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಪ್ರಾರಂಬದಲ್ಲಿ ಪುರೋಹಿತ ಧರ್ಮರಾಜ್ ಪೂಜಾರಿ ಗುರು ಪೂಜೆ ಮಾಡಿದರು. ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿಯವರು ಪ್ರಾರ್ಥನೆ ಸಲ್ಲಿಸಿದರು. ಸಭಾಗೃಹದಲ್ಲಿ ನೆರೆದಿದ್ದ ಗಣ್ಯರು, ಮಹಿಳೆಯರು, ಯುವಾಭ್ಯುದಯ ಸಮಿತಿ ಸದಸ್ಯರು, ಮಕ್ಕಳು ದೇಶದ ಪ್ರಗತಿಗಾಗಿ ಗುರು ಸನ್ನಿಧಿಯಲ್ಲಿ ಪ್ರಾಥಿರ್ಸಿದರು.810_6269_1573x1050
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಠಾಣೆ ಜಿಲ್ಲಾ ಶಿವಸೇನೆ ಧಕ್ಷಿಣ ಘಟಕದ ಅದ್ಯಕ್ಷ ಜಯ ಕೆ. ಪೂಜಾರಿಯವರು ದ್ವಜಾರೋಹಣ ಮಾಡಿದರು. ಅತಿಥಿಯಾಗಿ ಠಾಣೆ ಜಿಲ್ಲಾ ಶಿವಸೇನೆ ಧಕ್ಷಿಣ ಘಟಕದ ಸಂಘಟಕ ಶ್ರೀ ಸುಭಾಷ್ ಶೆಟ್ಟಿಯವರು ಜೊತೆಗೂಡಿದರು. ನೆರದ ಎಲ್ಲರೂ ರಾಷ್ಟ್ರಗೀತೆ ಹಾಡಿ ಧ್ವಜಕ್ಕೆ ವಂದನೆ ಸಲ್ಲಿಸಿದರು.

ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಮುಖ್ಯ ಅತಿಥಿ ಜಯ ಕೆ. ಪೂಜಾರಿ, ಅತಿಥಿ ಯಾಗಿ ಶ್ರೀ ಸುಭಾಷ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಸುಭಾಷ್ ಎಸ್. ಪಾಲನ ಹಾಗೂ ಸೀ. ಎನ್ ಕರ್ಕೇರ, ಗೌ. ಕಾರ್ಯದರ್ಶಿ ಪುರಂದರ್ ಪೂಜಾರಿ, ಗೌ. ಕೋಶಾಧಿಕಾರಿ ಲಲಿತ್ಚಂದ್ರ ಸುವರ್ಣರವರು ವೇದಿಕೆಯಲ್ಲಿ ಉಪಸ್ತಿಥರಿದ್ದರು. ಸಹಾಯಕ ಕಾರ್ಯದರ್ಶಿ ಶ್ರೀ ನವಿಶ್ ಆಮೀನ್ ಸ್ವಾಗತಿಸಿದರು. ಮಾಜಿ ಕಾರ್ಯಾಧ್ಯಕ್ಷ ರವಿ ಎಸ್ ಸನಿಲ್ ವೇದಿಕೆಯಲ್ಲಿದ್ದ ಗಣ್ಯರ ಪರಿಚಯ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವರಾಜ್ ಪೂಜಾರಿಯವರು ಪುಷ್ಪ ಗುಚ್ಛ ನೀಡಿ ಅತಿಥಿಗಳನ್ನು ಗೌರವಿಸಿದರು.810_6282_1573x1050

ಉಮಾ ನವಿಶ್ ಆಮೀನ್ ಹಾಗೂ ಕುಮಾರಿ ಸುರಕ್ಷಾ ಪಾಲನ ಸುಸ್ರಾವವಾಗಿ ದೇಶ ಭಕ್ತಿ ಗೀತೆ ಹಾಡಿದರು. ಆಶೀಶ್ ಕೋಟ್ಯಾನ್, ಕುಮಾರಿ ರಿಕಿತಾ ರವಿ ಸನಿಲ್ , ಕುಮಾರಿ ರೀತಿಕಾ ಪೂಜಾರಿ, ನವಿಶ್ ಆಮೀನ್, ಈಶ್ವರ್ ಕೋಟ್ಯಾನ್ ಹಾಗೂ ಯಶೋಧ ಕೇಶವ ಕರ್ಕೇರ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದರು.810_6352_1573x1050

ಸುಭಾಷ್ ಶೆಟ್ಟಿ ತಮ್ಮ ಭಾಷಣದಲ್ಲಿ ಡೊಂಬಿವಲಿ ಯ ತುಳು ಕನ್ನಡಿಗರಿಗೆ ಯಾವುದೇ ಸರಕಾರಿ ಯಾ ಮುನ್ಸಿಪಾಲಿಟಿಯ ಕೆಲಸವಿದ್ದರೆ ನಮ್ಮನ್ನು ಸಂಪರ್ಕಿಸಿದರೆ ತಮ್ಮ ಸಹಾಯ ಹಸ್ತ ಸದಾ ನಿಮ್ಮೋಟಿಗೆ ಇರುತ್ತ್ದೆ ಹಾಗೂ ರೇ ಸನ್ ಕಾರ್ಡ್, ಎಲೆಕ್ಶನ್ ಕಾರ್ಡ್, ಆಧಾರ್ ಕಾರ್ಡ್ ಇನ್ನಿತರ ಯಾವುದೇ ಕೆಲಸವಿದ್ದರೆ ತಮ್ಮನ್ನು ಸಂಪರ್ಕಿಸಬೇಕಾಗಿ ವಿನಂತಿಸಿದರು.810_6375_1573x1050

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಠಾಣೆ ಜಿಲ್ಲಾ ಶಿವಸೇನೆ ಧಕ್ಷಿಣ ಘಟಕದ ಅದ್ಯಕ್ಷ ಜಯ ಕೆ. ಪೂಜಾರಿ ಅವರು ಹಿರಿಯರ ಅಶ್ರೀವಾದ ದಿಂದ ನನಗೆ ರಾಜಕೀಯ ದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ತುಳು ಕನ್ನಡಿಗರು ಇದರ ಪ್ರಯೋಜನ ವನ್ನು ಪಡೆದು ಕೊಳ್ಳಬೇಕಾಗಿ ಹಾಗೂ ತಮಗೆ ಏನಾದರೂ ತೊಂದರೆ ಯಾದರೆ ತಮ್ಮ ಆಫೀಸ್ ನಲ್ಲಿ ತಿಳಿಸಿದರೆ ತಾವು ಸಹಾಯ ಮಾಡುದಾಗಿ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವರಾಜ್ ಪೂಜಾರಿ ಅವರು ಜಯ ಪೂಜಾರಿ ಹಾಗೂ ಸುಭಾಷ್ ಶೆಟ್ಟಿ ಅವರಿಗೆ ಬ್ರಹ್ಮಶ್ರೀ ನಾರಾಯಣ ಗುರುವಿನ ಆಶೀರ್ವದದಿಂದ ರಾಜಕೀಯದಲ್ಲಿ ಉನ್ನತ ಪದವಿ ಸಿಗಲಿ ಹಾಗೂ ನಾವೆಲ್ಲರೂ ಶಿಸ್ತು ಬದ್ಧರಾಗಿ ದೇಶದ ಸೇವೆ ಮಾಡೋಣ ಎಂದು ಕರೆ ನೀಡಿದರು.

ಕುಮಾರಿ ರಿಕಿತಾ ರವಿ ಸನಿಲ್ ಹಾಗೂ ನವಿಶ್ ಆಮೀನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯುವ ವಿಭಾಗದ ಸದಸ್ಯರು ವಹಿಸಿಕೊಂಡು ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *