ಬಂಟ್ವಾಳ: ಅರಣ್ಯ,ವನ್ಯ ಜೀವಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಇಲಾಖಾಧಿಕಾರಿಗಳು ಹಾಗೂ ಸಿಬಂದಿ ಗಳ ಪ್ರಯತ್ನ ಗಮನಾರ್ಹವಾದುದು ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘದ ವಿವಿಧ ಬೇಡಿಕೆಗಳ ಆದ್ಯತೆಗಳ ನೆಲೆಯಲ್ಲಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಮಂಗಳೂರು ವಿಭಾಗದ 2016-17ನೇ ಸಾಲಿನ ಮಹಾಸಭೆಯನ್ನು ಬಿ.ಸಿ.ರೋಡ್‍ನ ಲಯನ್ ಸೇವಾ ಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಸಚಿವರು ಸಂಗವೇ ಪ್ರಕಟಿಸಿದ 2017ರ ದಿನಚರಿ ಹಾಗೂ ಕ್ಯಾಲೆಂಡರ್‍ನ್ನು ಬಿಡುಗಡೆಗೊಳಿಸಿದರು. ನಿವೃತ್ತ ಅಧಿಕಾರಿಗಳಾದ ಕೆ.ಕೃಷ್ಣಪ್ಪ,ಶಿವಪ್ಪ ಧನದ,ಎಂ.ಎಂ.ಯೂಸುಫ್ ಅವರನ್ನು ಸನ್ಮಾನಿಸಿದರು. ಇಲಾಖಾಧಿಕಾರಿಗಳ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಸಂಘದ ಮಂಗಳೂರು ವಿಭಾಗದ ಅಧ್ಯಕ್ಷರಾದ ಮಹಾಬಲ ಡಿ.ಎಸ್. ಅಧ್ಯಕ್ಷತೆ ವಹಿಸಿ ಸಂಘದ ವಿವಿಧ ಬೇಡಿಕೆಯನ್ನು ಸಚಿವರ ಮುಂದಿಟ್ಟರು. ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ|ಸಂಜಯ್ ಎಸ್.ಬಿಜ್ಜೂರು,ಉಪ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ,ಲಯನ್ಸ್ ಕ್ಷಬ್ ಕಾರ್ಯದರ್ಶಿ ಉಮೇಶ್ ಆಚಾರ್ಯ,ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಪ್ರಕಾಶ್ ಬಿ. ಸ್ವಾಗತಿಸಿ,ಉಪಾಧ್ಯಕ್ಷ ಶಿವಾನಂದ ಆಚಾರ್ಯ ವಂದಿಸಿದರು. ಗೋಪಲ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಸ್ನೇಕ್ ಕಿರಣ್ ಪಿಂಟೊ ಅವರಿಂದ ಸ್ನೇಕ್ ಮಾಹಿತಿ ಕಾರ್ಯಾಗಾರ ನಡೆಯಿತು.

