ನವದೆಹಲಿ:ಈ ಬಾರಿ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ನಲ್ಲಿ ಸಿಗರೇಟ್ ಮೇಲಿನ ಸುಂಕವನ್ನು ಶೇ.11ರಿಂದ ಶೇ.72ರವರೆಗೆ ಏರಿಸಿದ್ದಾರೆ. ಇದರಿಂದಾಗಿ ಸಿಗರೇಟು ರೇಟು ಏರಿಕೆ ಕಾಣಲಿದ್ದು, ಅದರ ಹೊಗೆ ಇನ್ನಷ್ಟು ಘಾಟು ಆಗಿದೆ.
ಸಿಗರೇಟು ಬೆಲೆ ಹೆಚ್ಚಳವನ್ನು ದೇಶದ ಜನರು ಸ್ವಾಗತಿಸಿದ್ದು ಒಬ್ಬಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಪರಿಸರವಾದಿಗಳು, ವೈದ್ಯರು, ತಂಬಾಕು ವಿರೋಧಿಗಳು ಬೆಲೆ ಹೆಚ್ಚಳದಿಂದ ಸಿಗರೇಟು ಸೇವನೆಯನ್ನು ವರ್ಜಿಸುತ್ತಾರೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ಸಿಗರೇಟು ಪ್ರಿಯರು ಮಾತ್ರ ಈ ಬಗ್ಗೆ ತುಟಿಕ್ ಅನ್ನದಿರುವುದು ಸಹಜವಾಗಿಯೇ ಕುತೂಹಲಕ್ಕೂ ಕಾರಣವಾಗಿದೆ.
ಸಿಗರೇಟಿನ ಓಲ್ಡ್ ರೇಟ್ ನತ್ತ ಕಣ್ಣಾಯಿಸಿ
ಗೋಲ್ಡ್ ಫ್ಲೇಕ್ : 10 ರು.
ವಿಲ್ಸ್ ಕ್ಲಾಸಿಕ್ : 10 ರು.
ಐಟಿಸಿ (ಚಿಕ್ಕದು) : 7 ರು.
ಐಟಿಸಿ (ದೊಡ್ಡದು) : 10 ರು.
ಮಾರ್ಲ್ಬೊರೊ : 10 ರು.
ಇನ್ನು ಮುಂದಿನ ದಿನಗಳಲ್ಲಿ ಅದರ ಬೆಲೆಯಲ್ಲಿ 2 ರೂ ಹೆಚ್ಚಳ ಕಾಣಲಿದೆ.

