ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚಶ್ರೀ ಗ್ರೂಪ್ಸ್ ವಿಟ್ಲ ಇವರು ನಡೆಸಿ ಕೊಟ್ಟ ಸ್ಟಾರ್ ನೈಟ್ಸ್ ರಸಮಂಜರಿ ಮತ್ತು ನೃತ್ಯ ಕಾರ್ಯಕ್ರಮವನ್ನು ಮಂಗಳೂರು ರೈ ಎಸ್ಟೇಟಿನ ಅಶೋಕ್ ರೈ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ, ವಿಟ್ಲ ಜೆಸಿಐ ನಿಕಟ ಪೂರ್ವ ಅಧ್ಯಕ್ಷ ಬಾಬು ಕೊಪ್ಪಳ, ಉದ್ಯಮಿ ಸುಬಾಶ್ ಚಂದ್ರ ನಾಯಕ್, ಪಂಚಶ್ರೀ ಗ್ರೂಪ್ ನ ಅಧ್ಯಕ್ಷ ಮತ್ತು ಸದಸ್ಯರು ಉಪಸ್ಥಿತರಿದ್ದರು.

