ಮುಂಬಯಿ: ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮೀಲನವು ಇದೇ ಜ.28ರ ಶನಿವಾರ ಸಂಜೆ 6.00 ಗಂಟೆಯಿಂದ ಅಂಧೇರಿ ಪೂರ್ವದ ಸಾಕಿನಾಕ ಪೆನ್‍ನ್ಸುಲಾ ಹೊಟೇಲು ಸಭಾಗೃಹದಲ್ಲಿ ಆಯೋಜಿಸಲಾಗಿದೆ.

kamire

nityananda

ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ಗೌರವ ಅಧ್ಯಕ್ಷ ಶಿರ್ವಾ ನಿತ್ಯಾನಂದ ಹೆಗ್ಡೆ ಅವರ ಸಾರಥ್ಯ ಮತ್ತು ಘಟಕದ ಅಧ್ಯಕ್ಷ ಸಿಎ| ಸೋಮನಾಥ ಕುಂದರ್ ಅವರ ಅಧ್ಯಕ್ಷತೆಯಲ್ಲಿ ನೇರವೇರಲಿದ್ದು, ಮುಖ್ಯ ಅತಿಥಿsಗಳಾಗಿ ವಿಜಯ ಕಾಲೇಜು ಮೂಲ್ಕಿ ಗರ್ವನಿಂಗ್ ಕೌನ್ಸಿಲಿಂಗ್ ಅಧ್ಯಕ್ಷೆ ಶ್ರೀಮತಿ ಶವಿೂನಾ ಆಳ್ವ, ಕಾಲೇಜಿನ ಹಾಲಿ ಪ್ರಾಂಶುಪಾಲ ಡಾ| ಕೆ.ನಾರಾಯಣ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಆಗಮಿಸಲಿದ್ದಾರೆ. ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ ಸಿಎ| ಶಂಕರ ಬಿ.ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಸಹಾಯಹಸ್ತವಾಗಿ ರಚಿಸಲಾದ ವಿದ್ಯಾನಿಧಿಯನ್ನು ಉದ್ಘಾಟಿಸಲಿದ್ದಾರೆ.

narayana

shamira

ಕಾರ್ಯಕ್ರಮದಲ್ಲಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ| ಕೆ.ಆರ್ ಶಂಕರ್ ಹಾಗೂ ವಿಶ್ರಾಂತ ಪ್ರಾಚಾರ್ಯ ಪ್ರೊ| ಎಸ್.ಗೋವಿಂದ ಭಟ್ ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಕಾಲೇಜಿನ ಹಳೆ ವಿದ್ಯಾರ್ಥಿ ಶಿಮಂತೂರು ಚಂದ್ರಹಾಸ ಶೆಟ್ಟಿ, ಸಿಎ| ಅಶ್ವಜಿತ್ ಹೆಜ್ಮಾಡಿ ಮತ್ತು ರವೀಂದ್ರ ಪುತ್ರನ್ ಅವರನ್ನು ಸನ್ಮಾನಿಸಲಾಗುವುದು ಹಾಗೂ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಲಾಗುವುದು ಎಂದು ಸಂಘದ ಪ್ರಕಟನೆ ತಿಳಿಸಿದೆ.

somanath

ಹಳೆ ವಿದ್ಯಾರ್ಥಿಗಳು ತಮ್ಮ ಮಕ್ಕಳ ಎಸ್‍ಎಸ್‍ಸಿ ಮತ್ತು ಎಚ್‍ಎಸ್‍ಸಿ 2015-16ರ ಸಾಲಿನ 80% ಅಧಿಕ ಅಂಕಗಳಿಸಿದ ಅಂಕಪತ್ರ ಹಾಗೂ ಡಾಕ್ಟರ್ ಮತ್ತು ಇಂಜಿನಿಯರಿಂಗ್ ಡಿಗ್ರಿ ಪಾಸಾದ ಮಕ್ಕಳ ಸರ್ಟಿಫಿಕೇಟು ಇತ್ಯಾದಿಗಳನ್ನು ಇ-ಮೇಲ್ ಮೂಲಕ ಕಳುಹಿಸಬೇಕಾಗಿ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

shankar

ಈ ಕಾರ್ಯಕ್ರಮದಲ್ಲಿ ವಿಜಯ ಕಾಲೇಜು ಮೂಲ್ಕಿ ಇದರ ಎಲ್ಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಉಪಾಧ್ಯಕ್ಷ ಆನಂದ್ ಶೆಟ್ಟಿ , ಕಾರ್ಯದರ್ಶಿ ವಾಸುದೇವ ಎಂ. ಸಾಲ್ಯಾನ್ ಮತ್ತು ಕೋಶಾಧಿಕಾರಿ ಹರೀಶ್ ಕೆ.ಹೆಜ್ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *