ಮುಂಬಯಿ: ಮುಂಬರುವ ಬೃಹನ್ಮುಂಬಯಿ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಅರ್ಹ ಕ್ರೈಸ್ತ ಸಮಾಜ ಬಂಧು ನಗರ ಸೇವಕಕಾಂಕ್ಷಿಗಳಿಗೆ ಆಯಾ ವಾರ್ಡ್‍ಗಳಿಂದ ಕಾಂಗ್ರೇಸ್ (ಐ) ಪಕ್ಷದಲ್ಲಿ ಸ್ಪರ್ಧಿಸುವಲ್ಲಿ ಅವಕಾಶ ಒದಗಿಸಿ ಕೊಡುವಂತೆ ಮುಂಬಯಿ ಪ್ರದೇಶ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ, ಮಹಾರಾಷ್ಟ್ರ ರಾಜ್ಯದ ಅಲ್ಪಸಂಖ್ಯಾಕ ಆಯೋಗದ ಮಾಜಿ ಉಪ ಕಾರ್ಯಾಧ್ಯಕ್ಷೆ ಜಾನೇಟ್ ಎಲ್.ಡಿ’ಸೋಜಾ ಅವರು ಕಾಂಗ್ರೇಸ್ (ಐ) ಪಕ್ಷದ ಮುಖ್ಯಸ್ಥರನ್ನು ಒತ್ತಾಯಿಸಿದರು.

ಮುಂಬಯಿ ಮಹಾನಗರದಲ್ಲಿನ ಕ್ರೈಸ್ತ ಸಮುದಾಯದ ವಿವಿಧ ಮುಖಸ್ಥರನ್ನೊಳಗೊಂಡು ಮುಂಬಯಿ ಪ್ರದೇಶ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ, ಮಹಾರಾಷ್ಟ್ರ ರಾಜ್ಯದ ಅಲ್ಪಸಂಖ್ಯಾಕ ಆಯೋಗದ ಮಾಜಿ ಉಪ ಕಾರ್ಯಾಧ್ಯಕ್ಷೆ ಜಾನೇಟ್ ಎಲ್.ಡಿ’ಸೋಜಾ ಅವರ ನೇತೃತ್ವದ ನಿಯೋಗವು ಮಹಾರಾಷ್ಟ್ರ ಪ್ರದೇಶ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಅಶೋಕ್ ಚವ್ಹಾಣ್ ಅವರನ್ನು ನರಿಮಾನ್ ಪಾಯಿಂಟ್ ಅಲ್ಲಿನ ಕಾಂಗ್ರೇಸ್ ಕಾರ್ಯಾಲಯ ಗಾಂಧಿ ಭವನದಲ್ಲಿ ಭೇಟಿ ನೀಡಿ ಮನವಿ ಸಲ್ಲಿಸಿತು


ವೇದಿಕೆಯಲ್ಲಿ ಕಾಂಗ್ರೆಸ್ ನೇತಾರರುಗಳಾದ ಸಚಿನ್ ಸಾವಂತ್, ಭಾೈಯಿ ಜಗ್‍ತಪ್, ಡಿ.ಡಿ ತ್ರೀಭುವನ್, ಬಾಂಬೇ ಈಸ್ಟ್ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷ ವಿಲಿಯಂ ಡಿ’ಸೋಜಾ, ಕಥೋಲಿಕ್ ಸಭಾ ಮುಂಬಯಿ ಅಧ್ಯಕ್ಷೆ ರೀಟಾ ಡೆ’ಸಾ ಮತ್ತು ಮೈಕಲ್ ಪುರ್ಟಾಡೋ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಾಜಿ ಉಪಾಧ್ಯಕ್ಷ ಲಾರೇನ್ಸ್ ಡಿ’ಸೋಜಾ ಮುಲುಂಡ್, ಕುರ್ಲಾ ಪಶ್ಚಿಮದ ಹೋಲಿ ಕ್ರಾಸ್ ಚರ್ಚ್‍ನ ಧರ್ಮಗುರುಗಳಾದ ರೆ| ಫಾ| ಫಾಸ್ಕಲ್ ಸೆನಾವ್, ಡೊಲ್ಫಿ ಡಿ’ಸೋಜಾ, ಪ್ರೆಸಿಲ್ಲಾ ಡಬ್ಲ್ಯೂ ಬುಥೆಲ್ಲೋ, ಗ್ಯಾಬಿ ಡಿ’ಮೆಲ್ಲೊ ಕುರ್ಲಾ, ವಿನ್ನಿ ಡಿ’ಸೋಜಾ, ಡಾನ್ ಅಗೇರೊ ನ್ಯಾ| ರಫಾಯಲ್ ಡಿ’ಸೋಜಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮುಂಬರುವ ಬೃಹನ್ಮುಂಬಯಿ ಮಹಾನಗರ ಪಾಲಿಕಾ ಚುನಾವಣೆಯಲ್ಲಿ ಅರ್ಹ ಕ್ರೈಸ್ತ ಸಮಾಜ ಬಂಧು ನಗರ ಸೇವಕಕಾಂಕ್ಷಿಗಳಿಗೆ ಆಯಾ ವಾರ್ಡ್‍ಗಳಿಂದ ಕಾಂಗ್ರೇಸ್ (ಐ) ಪಕ್ಷದಲ್ಲಿ ಸ್ಪರ್ಧಿಸುವಲ್ಲಿ ಅವಕಾಶ ಒದಗಿಸಿ ಕೊಡುವಂತೆ ಮನವಿ ಸಲ್ಲಿಸಲಾಯಿತು.
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

