ಮುಂಬಯಿ: ಗುರು ಸೇವ ಸಮಿತಿ ಬಾಹ್ರೇಯ್ನ್ ಅನಿವಾಸಿ ರಾಷ್ಟ್ರದಲ್ಲಿ ತಾಯಿನಾಡಿನ ಸೊಬಗನ್ನು ಸವಿಯುವ ಸಾಂಸ್ಕೃತಿಕ ಹಬ್ಬ “ಕರಾವಳಿ ಸಂಭ್ರಮ 2017” ಬರುವ ಜನವರಿ.27.01.2017 ರಂದು ಶುಕ್ರವಾರ ಸಂಜೆ 3.00 ಗಂಟೆಗೆ ಬಾಹ್ರೇಯ್ನ್ ಮನಮ ಅಲ್ಲಿರುವ ಆಲ್‍ರಾಜ ಶಾಲಾ ಭವ್ಯ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿಸಗಲಿದೆ.
ಗಲ್ಫ್ ರಾಷ್ಟ್ರದಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೊ ಡಾ| ಶಿವರಾಜ್ ಕುಮಾರ್ ಪಾಲ್ಗೊಳ್ಳಲಿದ್ದಾರೆ, ಗೌರವ ಅತಿಥಿಗಳಾಗಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಕರ್ನಾಟಕ ವಿಧಾನ ಪರಿಷತ್ತ್ ಸದಸ್ಯ, ಮಾಜಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ, ನಿಧಿಲ್ಯಾಂಡ್ ಮಂಗಳೂರು ಇದರ ಮಾಲಕ ಪ್ರಶಾಂತ ಸನೀಲ್, ಮುಂಬಯಿ ಉದ್ಯಮಿ, ಚಲನಚಿತ್ರ ನಿರ್ಮಾಪಕ ಡಾ| ರಾಜಶೇಖರ್ ಆರ್.ಕೋಟ್ಯಾನ್, ಜಾನಪದ ವಿದ್ವಾಂಸ ದಯಾನಂದ ಕತ್ತಲ್‍ಸರ್, ಚಂದ್ರಶೇಖರ ಸುವರ್ಣ ಮುಲ್ಕಿ, ಮಸ್ಕಿರಿ ಕುಡ್ಲ ಹಾಸ್ಯ ಕಲಾಕಾರ ದೀಪಕ್ ಹಾಗೂ ವಿವಿಧ ಗಲ್ಫ್ ರಾಷ್ಟ್ರಗಳ ಮುಖ್ಯಸ್ಥರು, ಮಹಾನೀಯರು ಭಾಗವಹಿಸಲಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆಯುವ ಈ ಸಾಂಸ್ಕೃತಿಕ ಸಂಭ್ರಮದಲ್ಲಿ ಸ್ಥಳೀಯ ಮತ್ತು ವಿವಿಧ ಗಲ್ಫ್ ಮತ್ತಿತರ ರಾಷ್ಟ್ರಗಳ ಕಲಾವಿದರುಗಳು ವಿವಿಧನೃತ್ಯ ವೈವಿಧ್ಯ ಪ್ರದರ್ಶಿಸಿ ಬಾಹ್ರೇಯ್ನ್‍ನಲ್ಲಿ ಒಂದು ಹೊಸ ಚರಿತ್ರೆ ನಿರ್ಮಿಸಲಿದೆ.


ಕರ್ನಾಟಕ ಕರಾವಳಿಯ ಎಲ್ಲಾ ಸಂಘಸಂಸ್ಥೆಗಳು ಒಂದಾಗಿ ತಮ್ಮ ಸಾಂಸ್ಕೃತಿಕ ಲೋಕವನ್ನು ಪ್ರತಿಬಿಂಬಿಸುವ ಸಲುವಾಗಿ ಪ್ರತಿಯೊಂದು ಸಂಘಸಂಸ್ಥೆಯಿಂದಲೂ ನಾವು ಗ್ರೂಪ್ ಡಾನ್ಸ್ (ಜಾನಪದ ಅಥವಾ ಫಿಲ್ಮ್‍ಡಾನ್ಸ್) ಸಮಯ ಸಂಜೆ 3.00 ಗಂಟೆಗೆ ಆಯೋಜಿಸಲಾಗಿದೆ. ಧರ್ಮಾರ್ಥ ಪ್ರವೇಶದೊಂದಿಗೆ ಜರುಗುವ ಈ ಕಾರ್ಯಕ್ರಮಕ್ಕೆ ಸಂಸ್ಕೃತಿ, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.


ತಾ.28.01.2017ಶನಿವಾರ “ಬಿಲ್ಲವ ಸಮಾಗಮ” ಕಾರ್ಯಕ್ರಮ ಸಂಜೆ ಗಂಟೆ 7.00ಕ್ಕೆ ಶೇಖ್ ಇಸ ಬಿನ್ ಸಲ್ಮಾನ್ ಕಲ್ಚರಲ್ ಸಭಾಗೃಹ ಅದ್ಲಿಯಾ ಇಲ್ಲಿ ನಡೆಯಲಿದೆ. ಸಂಗೀತ, ನೃತ್ಯ, ಹಾಸ್ಯನಾಟಕ, ಜಾನಪದ ನೃತ್ಯಗಳು, ಈ ಕಾರ್ಯಕ್ರಮದಲ್ಲಿ ಮೇಳೈಸಲಿದೆ. ಈ ಎರಡು ಕಾರ್ಯಕ್ರಮಗಳಿಗೆ ತಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತಿದ್ದೇವೆ.
ಹೆಚ್ಚಿನ ವಿವರಗಳಿಗೆ ಅಧ್ಯಕ್ಷ ರಾಜಕುಮಾರ್ ಮೊಬಾಯ್ಲ್ ಸಂಖ್ಯೆ 0097339688395 ಸಂಪರ್ಕಿಸಬಹುದು


