ಉಡುಪಿ: ವ್ಯಕ್ತಿತ್ವ ವಿಕಸನವಾದರೆ ಮಾತ್ರ ಮಾನವ ಸಮಾಜದಲ್ಲಿ ಗುರುತಿಸಿಕೊಳ್ಳುವ ಕೆಲಸ ಮಾಡಬಹುದು ಎಂದು ಜೇಸಿಐ ಭಾರತದ ಪೂರ್ವ ರಾಷ್ಟೀಯ ಉಪಾದ್ಯಕ್ಷ ಸದಾನಂದ ನಾವಡ ಹೇಳಿದರು. ಅವರು ಜನವರಿ.11 ರಂದು ಬುಧವಾರ ಮಲ್ಪೆ ಲಯನ್ಸ್ ಭವನದಲ್ಲಿ ನಡೆದ ಜೇಸಿಐ ಉಡುಪಿ ಸಿಟಿಯ ಪದಪ್ರಧಾನ ಸಮಾರಂಭದಲ್ಲಿ ಮಾತನಾಡಿದರು. ಬಯಲು ವಿ.ವಿಯಂತೆ ಜೇಸಿಯು ಕೆಲಸ ಮಾಡುತ್ತಿದೆ.ಹೀಗಾಗಿ ಹೆಚ್ಚಿನ ಯುವಕರು ಈ ಆಂದೋಲನದಲ್ಲಿ ಸೇರಬೇಕು ಎಂದರು.
ಮುಖ್ಯ ಅತಿಥಿಯಾಗಿ ಜೇಸಿಐ ವಲಯ 15 ರ ವಲಯಾದ್ಯಕ್ಷ ಸಂತೋಷ್ ಜಿ,ಕಬಡಿ ಅಸೋಸಿಯೇಷನ್ಉಡುಪಿ ಕಾರ್ಯದರ್ಶಿ ಕೃಷ್ಣಾನಂದ ಮಲ್ಪೆ,ನಿಕಟಪೂರ್ವ ವಲಯ ಅದ್ಯಕ್ಷ ಸಂದೀಪ್ ಕುಮಾರ್ ಭಾಗವಹಿಸಿ ಮಾತನಾಡಿದರು.
ಪದಗ್ರಹಣ ಅಧಿಕಾರಿಯಾಗಿ ವಲಯ ಉಪಾದ್ಯಕ್ಷ ಮರಿಯಪ್ಪ ಭಾಗವಹಿಸಿದ್ದರು.ನೂತನ ಅದ್ಯಕ್ಷ ಕರುಣಾಕರ ಬಂಗೇರ ರವರಿಗೆ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಅಧಿಕಾರ ಹಸ್ತಾಂತರಿಸಿದರು.ವೇದಿಕೆಯಲ್ಲಿ ಪೂರ್ವ ಅದ್ಯಕ್ಷ ವಿನಯ್ ಆಚಾರ್ಯ,ಕಾರ್ಯದರ್ಶಿ ಜಗದೀಶ್ ಶೆಟ್ಟಿ,ಸೌಮ್ಯ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಟಿವಿ ಕಾರ್ಯಕ್ರಮ ನಿರೂಪಕ ಅವಿನಾಶ್ ಕಾಮತ್ ಮತ್ತು ಬಾಕ್ಸಿಂಗ್ ನಲ್ಲಿ ರಾಷ್ಟ ಮಟ್ಟದಲ್ಲಿ ವಿಜೇತರಾದ ನಿತಿನ್,ಜೇಸಿರೆಟ್ ವಿಭಾಗದ ರಾಷ್ಟೀಯ ಸಂಯೋಜಕಿ ರೂಪಶ್ರೀ ರತ್ನಾಕರ ಅದೇ ರೀತಿ ನಮ್ಮ ಮನೆ ನಮ್ಮ ಮರ ತಂಡದ ಸದಸ್ಯರಾದ ಉರಗ ತಜ್ಞ ಗುರುರಾಜ್ ಸನಿಲ್ ಮತ್ತು ರವಿರಾಜ್ ಹೆಚ್.ಪಿ ರವರನ್ನು ಸನ್ಮಾನಿಸಲಾಯಿತು.
ನೂತನ ಅದ್ಯಕ್ಷರು ಪಧಾಧಿಕಾರಿಗಳಾದ ಸುಭಾಷ್ ಕುಮಾರ್,ಅಕ್ಷತಾ,ಪುನಿತ್ ಕುಮಾರ್,ಕಾವ್ಯವಾಣಿ ಕೊಡಗು,ಮುಂತಾದವರಿಗೆ ಪ್ರಮಾಣ ವಚನ ಭೋದಿಸಿದರು. ಕಾರ್ಯಕ್ರಮದಲ್ಲಿ ಪೂರ್ವಅದ್ಯಕ್ಷ ಶಕೀರ್ ಹಾವಂಜೆ,ಪೂರ್ಣಿಮಾ ಸುರೇಶ್,ಬಾಸುಮ ಕೊಡಗು,ಗಣೇಶ್ ಬ್ರಹ್ಹಾವರ, ಮುಂತಾದವರಿದ್ದರು. ವಿವಿಧ ಘಟಕಗಳಿಂದ ಸದಸ್ಯರು ಭಾಗವಹಿಸಿದ್ದರು.
