ನಿಟ್ಟೆ: ನಿಟ್ಟೆ ಶಿಕ್ಷಣ ಸಮೂಹ ಸ೦ಸ್ಥೆಯ ಘಟಕವಾದ, ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ಼್ ನರ್ಸಿ೦ಗ್ ಸೈನ್ಸಸ್ ಸ೦ಸ್ಥೆಯು ತಮ್ಮ ಬೆಳ್ಳಿಹಬ್ಬದ ವರ್ಷದ ಪ್ರಯುಕ್ತ ಜನವರಿ ೭, ೨೦೧೭ ರ೦ದು ನಿಟ್ಟೆ ಅ೦ತರಾಷ್ಟ್ರೀಯ ಕೇ೦ದ್ರ, ಪ೦ಪ್ ವೆಲ್, ಮ೦ಗಳೂರಿನಲ್ಲಿ ಹಳೇ ವಿದ್ಯಾರ್ಥಿಗಳ ಪುನರ್ಮಿಲನವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸಲರ್ ಆಗಿರುವ ಪ್ರೊ. ಡಾ. ಶಾ೦ತರಾಮ ಶೆಟ್ಟಿ ಇವರು ಕಳೆದ ೧೦ ವರ್ಷಗಳಿ೦ದ ಪೋಷಕ ಆಸ್ಪತ್ರೆಯಾದ ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ೮ ಹಿರಿಯ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

nitte

ತಮ್ಮ ಅಧ್ಯಕ್ಷತಾ ಭಾಷಣದಲ್ಲಿ ಇವರು ಈ ಸ೦ಸ್ಥೆಯ ಹಳೇ ವಿದ್ಯಾರ್ಥಿಗಳ ಅಸಾಧಾರಣ ಸೇವೆ ಹಾಗೂ ಸಮಾಜಕ್ಕೆ ಇವರು ನೀಡುತ್ತಿರುವ ಕೊಡುಗೆಗಳನ್ನು ಗುರುತಿಸಿದರು ಹಾಗೂ ಸ೦ಸ್ಥೆಯ ಬೆಳ್ಳಿ ಹಬ್ಬದ ವರ್ಷಕ್ಕೆ ಶುಭ ಹಾರೈಸಿದರು. ಹಳೇ ವಿದ್ಯಾರ್ಥಿ ಸ೦ಘದ ಪದ ನಿಮಿತ್ತ ಅಧ್ಯಕ್ಷರಾದ ಡಾ. ಫ಼ಾಟಿಮಾ ಡಿ’ಸಿಲ್ವಾ ಇವರು ವೃತ್ತಿ ಜೀವನ ಹಾಗೂ ವಿದ್ಯಾ ಸ೦ಸ್ಥೆಗೆ ಎಲ್ಲಾ ಹಳೇ ವಿದ್ಯಾರ್ಥಿಗಳು ನೀಡಿದ ಕೊಡುಗೆಗಳನ್ನು ಸ್ಮರಿಸಿ ಅಭಿನ೦ದಿಸಿದರು. ಸ೦ಘದ ಸ೦ಪಾದಕರಾದ ಶ್ರೀಮತಿ ಸುಬಿನ್ ಮರಿಯ ಜೇಕಬ್ ಇವರು ವರದಿ ವಾಚಿಸಿದರು.

ಮ೦ಗಳೂರಿನ ಸುತ್ತಮುತ್ತಲಿನ ಪ್ರದೇಶದಿ೦ದ ಸುಮಾರು 65 ಹಳೇ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಳೇ ವಿದ್ಯಾರ್ಥಿಯಾದ ಶ್ರೀಮತಿ ಲತಾ, ಸರ್ವರನ್ನು ಸ್ವಾಗತಿಸಿದರು. ಶುಶ್ರೂಷ ಶಾಲಾ ಪ್ರಾ೦ಶುಪಾಲರಾದ ಶ್ರೀಮತಿ ಕ್ಲೀಟಾ ಪಿ೦ಟೋ, ಇವರು ಕಾರ್ಯಕ್ರಮವನ್ನು ಸ೦ಘಟಿಸಿದರು. ಕುಮಾರಿ ಹೆಲಿಟಾ ಪಿ೦ಟೋ ನಿರೂಪಿಸಿದರು, ಶ್ರೀಮತಿ ಡೈಸ್ಲಿನ್ ಲೋಬೊ ವ೦ದಿಸಿದರು. ಈ ಸ೦ದರ್ಭದಲ್ಲಿ ಹೊಸ ಪದಾಧಿಕಾರಿಗಳ ಚುನಾವಣೆಯನ್ನು ಆಯೋಜಿಸಲಾಗಿತ್ತು. ಶ್ರೀಮತಿ ಕ್ಲೀಟಾ ಪಿ೦ಟೋ ಇವರು ಸರ್ವಾನುಮತದಿ೦ದ ಕಾರ್ಯದರ್ಶಿಯಾಗಿ ಚುನಾಯಿತರಾದರು.

By suddi9

Leave a Reply

Your email address will not be published. Required fields are marked *