ಕೈಕಂಬ:  ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಹಾನ್ ದೇಶ ಭಕ್ತ ಸ್ವಾಮಿವಿವೇಕಾನಂದರ 154ನೇ ಜನ್ಮದಿನಾಚರಣೆಯು ಜ.12ರಂದು ಜರುಗಿತು. ಪೊಳಲಿ ರಾಮಕೃಷ್ಣ ತಪೋವನದಿಂದ ಪೊಳಲಿ ಮಾರ್ಗವಾಗಿ, ವಿವೇಕಾನಂದ ರಸ್ತೆಯ ಮೂಲಕ ಅಡ್ಡೂರಿನವರೆಗೆ ಮೆರವಣಿಗೆ ನಡೆಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.

12 vp vivekananda jayanti 1

9

12 vp vivekananda jayanti

13

12

ಈ ಸಂದರ್ಭದಲ್ಲಿ ಶುಭೋದಯ ವಿದ್ಯಾಲಯ ಮೂಡುಶೆಡ್ಡೆ, ಶ್ರೀ ವಿದ್ಯಾ ವಿಲಾಸ ಶಾಲೆ ಪೊಳಲಿ, ಶ್ರೀ ರಾಜರಾಜೇಶ್ವರೀ ಪ್ರೌಢಶಾಲೆ ಪೊಳಲಿ, ರಾಜ ಅಕಾಡೆಮಿ ಶಾಲೆ ಗಂಜಿಮಠ, ನಿರಂಜನ ಸ್ವಾಮಿ ಕಾಲೇಜು ಸುಂಕದಕಟ್ಟೆ, ಸರಕಾರಿ ಪ್ರಾಥಮಿಕ ಶಾಲೆ ಪಲ್ಲಿಪಾಡಿ, ಯೂನಿರ್ವಸಿಟಿ ಕಾಲೇಜು ಮಂಗಳೂರು, ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ ಈ ಎಂಟು ಶಾಲೆಯ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

11

2

3

4

5

6

7

8

10

14

15

16

1

ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ರಾಮಕೃಷ್ಣ ತಪೋವನ ಶಾಖೆ ಪೊಳಲಿ, ವೆಂಕಟೇಶ ನಾವಡ ಪೊಳಲಿ, ತಾ.ಪಂ ಸದಸ್ಯ ಯಶವಂತ ಪೂಜಾರಿ, ಪಂ ಸದಸ್ಯರಾದ ಲೋಕೇಶ್ ಭರಣಿ, ಹಾಗೂ ವಿವಿಧ 8 ಶಾಲೆಯ ಶಿಕ್ಷಕರು, ಭಾಗವಹಿಸಿದ್ದರು. ತದನಂತರ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು.

By Suddi9

Leave a Reply

Your email address will not be published. Required fields are marked *