ಕೈಕಂಬ: ದೇಶದ ಭವಿಷ್ಯ ನಿರ್ಮಿಸುವ ಮುಂದಿನ ಪೀಳಿಗೆಗೆ ಶಿಕ್ಷಣ ನೀಡುವುದಕ್ಕಿಂತ ಬೇರೆ ಸಮಾಜ ಸೇವೆ ಇಲ್ಲ. ಹಾಗೆಯೇ ಸರಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನದಲ್ಲಿ ಸರಕಾರದ ಜೊತೆ ಪೋಷಕರು ಮತ್ತು ಶಿಕ್ಷಕರು ಕೈ ಜೋಡಿಸಬೇಕು ಎಂದು ಮಂಗಳೂರು ಉತ್ತರ ವಲಯದ ಶಾಸಕ ಬಿ.ಎ ಮೊೈದಿನ್ ಬಾವಾ ನುಡಿದರು.
ಇವರು ದ.ಕ.ಜಿ.ಪಂ ಉನ್ನತೀಕರಿಸದ ಹಿ.ಪ್ರಾ.ಶಾಲೆ ಕಿಲೆಂಜಾರಿನಲ್ಲಿ ನಡೆದ 107ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾಲಯ ಮಕ್ಕಳ ದೇಗುಲ. ಶಾಲಾ ಶೈಕ್ಷಣಿಕ ವಾತಾವರಣ ಉತ್ತಮವಿದ್ದಾಗ ಮಕ್ಕಳು ಜ್ಞಾನ ಮತ್ತು ಸದ್ಗುಣ ಸಂಪನ್ನರಾಗಿ ಬೆಳೆಯುತ್ತಾರೆ ಎಂದು ಜಿ.ಪಂ ಸದಸ್ಯ ಜನಾರ್ಧನಗೌಡ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕುಪ್ಪೆಪದವು ಗ್ರಾ.ಪಂ ಅಧ್ಯಕ್ಷೆ ಲೀಲಾವತಿ, ಆನಂದ, ಉಪಾಧ್ಯಕ್ಷ ಡಿ.ಪಿ.ಹಮ್ಮಬ್ಬ, ಸದಸ್ಯರುಗಳಾದ ಮಹಮ್ಮದ್ ಶರೀಫ್ ಕಜೆ, ಭವಾನಿ, ರಝಿಝಾ, ಹಿರಣ್ಯಾಕ್ಷ ಕೋಟ್ಯಾನ್, ವಸಂತಿ, ಬಿ.ಎಲ್ ಅಬುಬಕ್ಕರ್, ವಿಮಲ, ಮಂಗಳೂರು ತಾ.ಪಂ ಸದಸ್ಯರಾದ ನಾಗೇಶ್ ಶೆಟ್ಟಿ, ಅಣ್ಣಯ್ಯ ಎಂ, ರಾಜು ಶೆಟ್ಟಿ, ಎಲ್.ಉಮರಬ್ಬ, ಕೃಷ್ಣರಾವ್ ಬರಿಮಾರ್, ಅಬ್ದುಲ್ ರಜಾಕ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಮಹಮ್ಮದ್ ಷರೀಫ್ ಸ್ವಾಗತಿಸಿ, ಸಹಶಿಕ್ಷಕಿ ಮಧುಮಾಲತಿ ನಿರೂಪಿಸಿದರು, ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಸಿಸಿಲಿಯಾ ಧನ್ಯವಾದಗೈದರು.
ಇದೇ ವೇಳೆ ಸಂಸ್ಥೆಯ ಮುಖ್ಯಸ್ಥರಾದ ಯತಿರಾಜ್.ಕೆ., ಇವರು ಶಾಲಾ ಶೈಕ್ಷಣಿಕ ವರದಿಯನ್ನು ಮಂಡಿಸಿದರು. ನೃತ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿ ದೀಕ್ಷಿತ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕವೃಂದ, ಎಸ್.ಡಿ.ಎಮ್.ಸಿ ಬಳಗ ಹಾಗೂ ಪೋಷಕರ ಸಂಪೂರ್ಣ ಸಹಕಾರದಿಂದ, ಊರದಾನಿಗಳ ಉದಾರ ಧನ ಸಹಾಯದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

