ಕೈಕಂಬ: ಕುಪ್ಪೆಪದವು: ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎ ಮೊೈದಿನ್ ಬಾವಾ ದಿಢೀರ್ ಭೇಟಿ ನೀಡಿ ಇಲ್ಲಿಯ ವೈದ್ಯಾಧಿಕಾರಿಗಳಿಂದ ಸ್ಥಿತಿಗತಿಯ ಬಗ್ಗೆ ವಿಚಾರಿಸಿದ್ದರು.

3-vp-moyuddin-bava

ಈ ಸಂದರ್ಭದಲ್ಲಿ ಆರೋಗ್ಯ ಕೆಂದ್ರದ ಸಿಬ್ಬಂದಿ ಕೊರತೆ, ಜನರಲ್ ಔಷಧಿಯನ್ನು ಸರಕಾರಿ ದರದಲ್ಲಿ ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆಯ ಪರಿಹಾರಕ್ಕೆ ಭರವಸೆ ನೀಡಿದ್ದರು. ಶಾಸಕರು ಪರಿಸರ ಶುಚಿತ್ವ, ಪದಾಧಿಕಾರಿ ಸಿಬ್ಬಂದಿಯ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರ ಭೇಟಿಯ ಸಂದರ್ಭದಲ್ಲಿ ಮಂಗಳೂರು ತಾ.ಪಂ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್, ಕುಪ್ಪೆಪದವು ಗ್ರಾ.ಪಂ ಅಧ್ಯಕ್ಷೆ ಲೀಲಾವತಿ ಆನಂದ, ಗಂಜಿಮಠ ಗ್ರಾ.ಪಂ, ಉಪಾಧ್ಯಕ್ಷ ಝಕೀರ್, ಸದಸ್ಯರಾದ ಬಿ.ಎ ಅಬುಬಕ್ಕರ್ ಕಲ್ಲಾಡಿ, ಹಿರಣಾಕ್ಷ ಕೋಟ್ಯಾನ್, ಅಮೀನ್ ಭಾಷಾ ಇಂಡಿ, ಮಾಜಿ ಸದಸ್ಯರಾದ ಕೆ. ಆದಂ.ಕೆ.ಎಂಞ , ಕುಪ್ಪೆಪದವು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಸಿ ನವೀನ್, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ ಜ್ಯೋತಿ ಕೆ.ಆರ್, ಜಿಲ್ಲಾ ಪಂ ಮಾಜಿ ಸದಸ್ಯ ಕೃಷ್ಣ ಅಮೀನ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ರಫಿಕ್ ಆಚಾರಿಜೋರ, ಪುನೀತ್ ಕುಮಾರ್, ಎಲ್.ಉಮರಬ್ಬ, ರಾಮಚಂದ್ರ ಸಾಲಿಯಾನ್, ಲತೀಫ್ ಆಚಾರಿಜೋರ, ಸದಾಶಿವ ಕೆ., ಕೆ.ಎಂ ಅಬ್ದುಲ್ ಅಝೀದ್ ಕುಪ್ಪೆಪದವು, ರವಿ ಅಟ್ಟೇಪದವು, ಹಸನ್ ಮಾಣಿಪಳ್ಳ, ಲಕ್ಷ್ಮಣ, ರಝಾಕ್, ಶರೀಫ್, ಯು.ಬಿ ಬಸೀರ್, ಗಣೇಶ್ ಪೂಜಾರಿ, ಅನ್ವರ್ ಸದ್ದಾತ್, ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *