ಉಡುಪಿ: ವಲಯದ ಪ್ರತಿಷ್ಟಿತ ಘಟಕದಲ್ಲಿ ಒಂದಾದ ಜೀಸಿಐ ಉಡುಪಿ ಸಿಟಿ ಇದರ ನೂತನ ಅದ್ಯಕ್ಷರಾಗಿ ಉಡುಪಿ ಸ್ನೇಹ ಟ್ಯುಟೋರಿಯಲ್ ಕಾಲೇಜಿನ ಉಪ ಪ್ರಾಂಶುಪಾಲ ಕರುಣಾಕರ ಬಂಗೇರ ಇವರು ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷರಾಗಿ ರಾಘವೇಂದ್ರ ಪ್ರಭು, ಕಾರ್ಯದರ್ಶಿಯಾಗಿ ಸುಭಾಷ್ ಕುಮಾರ್, ಜೆಸಿರೆಟ್ ಅಧ್ಯಕ್ಷಾರಾಗಿ ಅಕ್ಷತಾ ಕೆ.ಎ, ಜೆಜೆಸಿ ಅಧ್ಯಕ್ಷರಾಗಿ ಪ್ರಶಾಂತ್ ರವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಗದೀಶ್ ಶೆಟ್ಟಿ (ಲೋಮ್) ಕಾವ್ಯವಾಣಿ ಕೊಡಗು (ಸಿ.ಡಿ) ಶಿಲ್ಪಾ ಜೋಷಿ (ಪಿ. ಆರ್), ರಫೀಕ್ ಖಾನ್ (ಐ. ಡಿ), ಸೌಮ್ಯ ಮುಂತಾದವರು ಆಯ್ಕೆಯಾಗಿದ್ದಾರೆ. ಘಟಕ ಪತ್ರಿಕೆ ಸಂಪಾದಕರಾಗಿ ಶರಾವತಿ ಆಯ್ಕೆಯಾಗಿದ್ದಾರೆ. ಸಲಹ ಸಮಿತಿಯ ಸದಸ್ಯರಾಗಿ ಎಲ್ಲಾ ಪೂರ್ವ ಅಧ್ಯಕ್ಷರು ಆಯ್ಕೆಯಾಗಿರುತ್ತಾರೆ.

