ಉಡುಪಿ: ಮಣಿಪಾಲದ ಮಾಧವ ಪೈ ಸ್ಮಾರಕ ಕಾಲೇಜು ಇದರ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಅಂಗವಾಗಿ ಡಿ.24 ರಂದು ಕಾಜಾರಗುತ್ತು ಪ್ರಾಥಮಿಕ ಶಾಲೆಯಲ್ಲಿ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಬೃಹತ್ ದಂತ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಆಡಳಿತಾಧಿಕಾರಿ ದಯಾನಂದ ಶೆಟ್ಟಿ ನೆರವೇರಿಸಿದರು. ವೇದಿಕೆಯಲ್ಲಿ ಪ್ರಾಂಶುಪಾಲೆ ರಾಧಿಕಾ ಪೈ,ತಾ.ಪಂ ಸದಸ್ಯೆ ಸಂದ್ಯಾ ಕಾಮತ್, ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು, ಉಪನ್ಯಾಸಕರಾದ ಪ್ರಕಾಶ್ ಭಟ್,ಶ್ರೀನಿವಾಸ ವೈದ್ಯ,ಡಾ||ಪ್ರಜ್ಞಾ ಮುಂತಾದವರಿದ್ದರು.

