ಉಡುಪಿ: ಕೇವಲ ಪಾಠ ಪುಸ್ತಕದಲ್ಲಿ ಪಡೆದ ಶಿಕ್ಷಣ ಸಮಾಜದಲ್ಲಿ ವ್ಯಕ್ತಿಯ ಅಭಿವೃಧಿಗೆ ಸಾಕಾಗುದಿಲ್ಲ ಬದಲಾಗಿ ಪಾಠದೊಂದಿಗೆ ಇತರ ಸೇವಾ ಚಟುವಟೆಕೆಗಳು ವ್ಯಕ್ತಿಯ ಅಭಿವೃಧಿಗೆ ಪೂರಕವಾಗುತ್ತದೆ ಎಂದು ಜೇಸಿಐ ಉಡುಪಿ ಸಿಟಿ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು. ಅವರು ಇತ್ತಿಚೆಗೆ ನಡೆದ ಪಟ್ಯ ಯು.ಎಸ್ ನಾಯಕ್ ಪ್ರೌಡ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು.

udupi

ಮಕ್ಕಳಿಗೆ ಯಾವುದೇ ರೀತಿಯ ಅಸ್ಯಿ ಮಾಡದೆ ಮಕ್ಕಳನ್ನೆ ಆಸ್ಯಯನ್ನಾಗಿ ಮಾಡಬೇಕು.ಮಕ್ಕಳಿಗೆ ಇಂದು ನೈತಿಕ ಶಿಕ್ಷಣದ ಅಗತ್ಯತೆ ಇದೆ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಂದೀಪ್ ಶೆಟ್ಟಿ ಮಾತನಾಡಿದರು.

ವೇದಿಕೆಯಲ್ಲಿ ಶಾಲೆಯ ಮುಖ್ಯಶಿಕ್ಷಕ ಶ್ರೀಕಾಂತ ಪ್ರಭು,ಪಟ್ಯ ರೂರಲ್ ಎಜುಕೇಶನ್ ಸೋಸೈಟಿಯ ಕಾರ್ಯದರ್ಶಿ ಅಣ್ಣಯ್ಯ ನಾಯಕ್ ಪಟ್ಯ,ಉಪಾದ್ಯಕ್ಷ ನಾಗೇಶ್ ನಾಯಕ್, ಶಾಲಾ ವಿದ್ಯಾರ್ಥಿ ನಾಯಕಿ ಶಾಲಿನಿ ಮುಂತಾದವರಿದ್ದರು.ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಶಾಲಾ ಕಚೇರಿ ಸಹಾಯಕರಾದ ರಾಘವ ಕೊಟ್ಯಾನ್ ರವರನ್ನು ಸನ್ಮಾನಿಸಲಾಯಿತು.ಅಲ್ಲದೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

By suddi9

Leave a Reply

Your email address will not be published. Required fields are marked *