ಬಂಟ್ವಾಳ: ಇಲ್ಲಿನ ಪುರಸಭೆಯನ್ನು ಬಯಲು ಶೌಚ ಮುಕ್ತ ಪ್ರದೇಶವೆಂದು ಘೋಷಣೆ ಮಾಡುವ ಉದ್ದೇಶದಿಂದ ಎಲ್ಲಾ ಮನೆಗಳು ಶೌಚಾಲಯ ಹೊಂದಿರಬೇಕೆಂದು ಪುರಸಭೆ ಸಂಕಲ್ಪ ಮಾಡಿದೆ. ಅದರಂತೆ ಬಂಟ್ವಾಳ ಪುರಸಭಾ ಬಿ.ಕಸ್ಬಾ ಗ್ರಾಮದ 2ನೇ ವಾರ್ಡಿನ ಜಕ್ರಿಬೆಟ್ಟು ಎಂಬಲ್ಲಿಯ ಶಾಂತ ಎಂಬವರಿಗೆ ಪುರಸಭಾ ನಿಧಿಯಿಂದ ರೂ.10 ಸಾವಿರ ಸಹಾಯಧನವನ್ನು ಶೌಚಾಲಯ ನಿರ್ಮಾಣಕ್ಕೆ ನೀಡಲಾಗಿದೆ.

jan-1

ಪುರಸಭಾ ಸದಸ್ಯ ಗಂಗಾಧರ ಅವರ ನೇತೃತ್ವದಲ್ಲಿ ಕೆಳಗಿನ ಮಂಡಾಡಿಯ ಮಹಮ್ಮಾಯಿ ಫ್ರೆಂಡ್ಸ್ ಇವರ ಸಹಕಾರದೊಂದಿಗೆ ಶ್ರಮದಾನದ ಮೂಲಕ ಹಾಗೂ ಉಳಿದ ಮೊತ್ತವನ್ನು ಸಂಗ್ರಹಿಸಿ ಒಟ್ಟು 30 ಸಾವಿರ ರುಪಾಯಿ ವೆಚ್ಚದಲ್ಲಿ ಶೌಚಾಲಾಯ ನಿರ್ಮಿಸಿಕೊಡಲಾಗಿದ್ದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ.

By suddi9

Leave a Reply

Your email address will not be published. Required fields are marked *