ಬಂಟ್ವಾಳ : ದ.ಕ. ಜಿಲ್ಲಾ ಮಲೆಕುಡಿಯ ಸಂಘ ಇದರ ಬಂಟ್ವಾಳ ತಾಲೂಕಿನ ಗ್ರಾಮಗಳ ಸಂಘ ರಚನಾ ಸಮಾಲೋಚನಾ ಸಭೆಯು ತಾಲೂಕು ಸಮಿತಿಯ ಅಧ್ಯಕ್ಷ ರಘು ಎರ್ಮಾಳ ಅವರ ಅಧ್ಯಕ್ಷತೆಯಲ್ಲಿ ಕನ್ಯಾನದ ಶಿರಂಕಲ್ಲು ವಾಣಿಶ್ರೀ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಜ.1 ರಂದು ಬೆಳಗ್ಗೆ ಗಂಟೆ 10 ಕ್ಕೆ ಜರಗಲಿದೆ.

untitled-1-copy

ಈ ಸಭೆಗೆ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷರಾದ ಅಣ್ಣಪ್ಪ ಎನ್.,ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಈದು,ಜಿಲ್ಲಾಧ್ಯಕ್ಷ ಸಂಜೀವ ಕುಲ್ಲಾಜೆ ಹಾಗೂ ಜಿಲ್ಲೆಯ ಪದಾಧಿಕಾರಿಗಳು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಸಂಘದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *