ಕೈಕಂಬ: ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಇವರ ಅಧ್ವರ್ಯುತನದಲ್ಲಿ ಗುರುಪುರ ಶ್ರೀ ವಜ್ರದೇಹಿ ಮಠ ಶ್ರೀ ಗುರುರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜ.3ರಿಂದ ಜ.5ರವರೆಗೆ “ವಜ್ರದೇಹಿ ಜಾತ್ರೆ” ಜರುಗಲಿದೆ ಎಂದು ವಜ್ರದೇಹಿ ಬಳಗದ ಪ್ರಕಟನೆ ತಿಳಿಸಿದೆ.
ಜ.3ರಂದು ಬೆಳಿಗ್ಗೆ 8 ಗಂಟೆಗೆ ಸ್ವಸ್ತಿ ಪುಣ್ಯಾಹ, ಸಾಮೂಹಿಕ ಪ್ರಾಥನೆ, ತೋರಣ ಮಯಹೂರ್ತ, ಆದ್ಯ ಗಣಯಾಗ, ಉಗ್ರಾಣ ಮುಹೂರ್ತ, ನವಕ ಪ್ರಧಾನ ಹೋಮ, ನವಕ ಕಲಶಾಭಿಷೇಕ ಹಾಗೂ ಬಹು ಅಪರೂಪವಾದ ವಿಶೇಷ ಸಾನಿಧ್ಯ ಹೊಂದಿರುವ “ಕೂರ್ಮ ಮಹಾಶಾಲಗ್ರಾಮ”ಕ್ಕೆ ಮಹಾಮಜ್ಜನ, ಸರ್ವಾಲಂಕಾರ, ಮಹಾಪೂಜೆ, ಪ್ರಸಾದ ವಿತರಣೆ., ಗಂ.1ಕ್ಕೆ ಅನ್ನಸಂತರ್ಪಣೆ, ಗಂ.6ರಿಂದ ಶ್ರೀ ದೇವರಿಗೆ ರಂಗಪೂಜೆ, ಶ್ರೀ ದೇವರ ಬಲಿ ಉತ್ಸವ, ಕಟ್ಟೆಪೂಜೆ, ಶ್ರೀ ದೇವರ ಶಯನ “ಕವಾಟ ಬಂಧನ”. ಗಂ.9.30ಕ್ಕೆ ಶ್ರೀ ರಾಜಶೇಖರಾನಂ ಸ್ವಾಮೀಜಿಯ ಶುಭಾಶೀರ್ವಾದದೊಂದಿಗೆ ಶ್ರೀ ವಜ್ರದೇಹಿ ಬಳಗ, ಗುರುಪುರ ಸಂಸ್ಥೆಗೆ 5ವರ್ಷ ತುಂಬುತ್ತಿರುವ ಸವಿನೆನಪಿಗಾಗಿ, ವಿದ್ಯಾರ್ಥಿಗಳ ಮುಂದಿನ ಹೆಜ್ಜೆಯನ್ನಿಟ್ಟುಕೊಂಡು ರ್ಖಯಾತ ಅಂಕಣಕಾರ, ಪ್ರಖರವಾಗ್ಮಿ “ಚಕ್ರವರ್ತಿ ಸೂಲಿಬೆಲೆ” ಹಾಗೂ ಯುವ ಬಿಗ್ರೇಡ್ ಅಧ್ಯಕ್ಷ “ನಿತ್ಯಾನಂದ ವಿವೇಕ ವಂಶಿ” ಇವರಿಂದ “ವಿಚಾರಗೋಷ್ಠಿ” ಹಾಗೂ ಸುಧೀರ್ ಉಳ್ಳಾಲ್ ಇವರ ಸಾರಥ್ಯದ “ಕುಡ್ಲ ಕ್ವೀನ್ಸ್” ಶ್ರೀ ವಜ್ರದೇಹಿ ಮಠ ಗುರುಪುರ ತಂಡದಿಂದ “ನೃತ್ಯ ವೈವಿಧ್ಯ”, ಗಂ.7ರಿಂದ ಸಭಾ ಕಾರ್ಯಕ್ರಮ ಜರುಗಲಿದ್ದು, ಶ್ರೀ ಹನುಮ ಬಾಲ ಸಂರಕ್ಷಣಾ ಕೇಂದ್ರದ ಅನಾಥ ಮಕ್ಕಳಿಗೆ ವಿವಿಧ ಸವಲತ್ತಿನ ವಿತರಣೆ, ಹಾಗೂ ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡಲಿದ್ದು, ಶ್ರೀ ವಜ್ರದೇಹಿ ಮಠ ಶ್ರೀ ರಾಜಶೇಖರಾನಂದ ಸ್ವಾಮೀಜಿಯ ದಿವ್ಯ ಉಪಸ್ಥಿತಿಯಲ್ಲಿ, ಮಾಜಿ ಸಂಸದೆ ತೇಜಸ್ವಿನಿ ಗೌಡ ಅತಿಥಿಯಾಗಿ ಸಭಾ ಕಾರ್ಯಕ್ರಮಲ್ಲಿ ಪಾಲ್ಗೊಳ್ಳುವರು.
