ಕೈಕಂಬ: ಸರಕಾರಿ,ಬ್ಯಾಂಕ್, ಖಾಸಗಿ ಕಂಪೆನಿಗಳಲ್ಲಿ ದುಡಿಯುವವರಿಗೆ ವಿಮೆ ಆಪತ್ತಿಗಾಗುತ್ತದೆ. ಆದರೆ ಬಡವ ಕೂಲಿ ಕಾರ್ಮಿಕರಿಗೆ ಗುಂಪು ವಿಮೆ ಆಪತ್ತಿಗೆ “ಅನಾಥೋ ದೈವ ರಕ್ಷಕ” ಎಂಬಂತೆ ರಕ್ಷಿಸುತ್ತದೆ. ಪೆರಾರ ಮಹಾ ಸಂಸ್ಥಾನ ಬಡ ಜನರಿಗಾಗಿ ಎಲ್‍ಐಸಿ ಸಂಸ್ಥೆಯ ಆಮ್‍ಆದ್ಮಿ ಗುಂಪು ವಿಮೆ ಮಾಡಿಸಿರುವುದು ಶ್ಲಾಘನೀಯ ಎಂದು  ಕರ್ನಾಟಕ ಬ್ಯಾಂಕಿನ ಶ್ರೀನಿವಾಸ್ ದೇಶ್‍ಪಾಂಡೆ ನುಡಿದರು.

27-vp-vidyarti-vetana-vitarane

ಇವರು ಶ್ರೀ ಪೆರಾರ ಮಹಾ ಸಂಸ್ಥಾನ ಮತ್ತು ಭಾರತೀಯ ಜೀವ ವಿಮಾ ನಿಗಮ, ಪಿಂಚಣಿ ಮತ್ತು ಗುಂಪು ವಿಮಾ ಯೋಜನೆಯ ಸಹಯೋಗದಲ್ಲಿ ಜರುಗಿದ ವಿದ್ಯಾರ್ಥಿ ವೇತನಾ ವಿತರಣಾ ಸಮಾರಂಭದಲ್ಲಿ ವೇತನ ವಿತರಿಸಿ ಮಾತನಾಡಿದರು.

3

ನಮ್ಮ ಸಂಸ್ಥೆ ಮಾಡುವ ಜನಪರ ಕಾರ್ಯಗಳ ಫಲವನ್ನು ನೀವು ಪಡೆದು ಬಾಕಿ ಉಳಿದವರಿಗೂ ತಿಳಿಸಿ ಸವರ ಬದುಕಿಗೂ ನೆರಳಾಗಬೇಕು. ಸಂಸ್ಥೆ ನಿಮ್ಮ ಸೇವೆ ಮಾಡಿದರೆ ನೀವು ಕ್ಷೇತ್ರದ ಸೇವೆ ಮಾಡಿ ಪುನೀತರಾಗಬೇಕು ಎಂದು ಸುಧೀರ್ ಪ್ರಸಾದ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕ್ರಷ್ಣಕುಮಾರ್  ಪೂಂಜಾ ಪರಂಗಿಪೇಟೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಮುಂಬಯಿ ಭಾಸ್ಕರ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು.

1

ಈ ಸಂದರ್ಭದಲ್ಲಿ ವಿಶ್ವನಾಥಶೆಟ್ಟಿ ತಿದ್ಯ ಮುಂಡಬೆಟ್ಟಗುತ್ತು, ಕ್ಷೇತ್ರದ ಆದ್ಯಕ್ಷ ಶಂಕರ ಮಾಡ, ಖಜಾಂಚಿ ಹರೀಶ್ ಶೆಟ್ಟಿ ಕೂಳ್ಪೆ, ಕಾರ್ಯದರ್ಶಿ ಪಿ.ಜಗದೀಶ್ ಪಣಂಬೂರು, ಕೃಷ್ಣ ಅಮೀನ್ ಪೆರಾರ, ಪದು ಪೆರಾರ ಪಂ.ಅಧ್ಯಕ್ಷೆ ಶಾಂತ ಎಂ. ಉಪಸ್ಥಿತರಿದ್ದರು. ಕಾರ್ಯದರ್ಶಿ ಪಿ.ಜಗದೀಶ ಸ್ವಾಗತಿಸಿ, ದಯಾನಂದ ಕತ್ತಲಸಾರ್ ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *