ಬಂಟ್ವಾಳ: ಇತ್ತೀಚೆಗೆ ನಿಧನ ಹೊಂದಿದ ಸಿದ್ಧಕಟ್ಟೆಯ ಉದ್ಯಮಿ, ಸಾಮಾಜಿಕ ಕಾರ್ಯಕರ್ತ, ಪ್ರಗತಿಪರ ಕೃಷಿಕ, ಪೂಂಜ ಶ್ರೀ ಪಂಚ ದುಗರ್ಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ, ಸಿದ್ಧಕಟ್ಟೆ ಬಂಟರ ಸಂಘದ ಗೌರವಾಧ್ಯಕ್ಷ ಪೊಡುಂಬ ಹೊಸಮನೆ ಸಂಜೀವ ಶೆಟ್ಟಿ ಅವರಿಗೆ ಸಿದ್ಧಕಟ್ಟೆ ಬಂಟರ ಸಂಘ ಹಾಗೂ ಸಾರ್ವಜನಿಕರ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಜು.1ರಂದು ಸಂಜೆ ಸಿದ್ಧಕಟ್ಟೆಯ ಅಶ್ವಿನಿ ವಾಣಿಜ್ಯ ಸಂಕೀರ್ಣದ ಅಕ್ಷಯ ಸಭಾಂಗಣದಲ್ಲಿ ಜರಗಿತು.

4 (4)
ಸಿದ್ಧಕಟ್ಟೆ ವೈದ್ಯ ಡಾ|ಪ್ರಭಾಚಂದ್ರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಬಡತನದಿಂದ ಶ್ರಮಪಟ್ಟು ಉನ್ನತಿಗೇರಿ ಇತರರ ಕಷ್ಟಗಳನ್ನರಿತು ಉಪಕಾರ ಮಾಡುವ ಪರೋಪಕಾರ ಗುಣ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸಂಜೀವ ಶೆಟ್ಟಿ ಅವರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಕೈಲಾದ ಸೇವೆಗೈದು ಬಡವ ಬಲ್ಲಿದರ ಆತ್ಮೀಯತೆ ಗಳಿಸಿದ ಮಂತ ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಇನ್ನೋರ್ವ ವೈದ್ಯ ಡಾ| ಸುದೀಪ್, ಗಣ್ಯರಾದ ಪ್ರಫುಲ್ಲ ರೈ , ಸಂಗಬೆಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು, ಬಂಟರ ಸಂಘದ ಗೌರವಾಧ್ಯಕ್ಷ ರಾಮಣ್ಣ ರೈ , ಶ್ರೀಧರ ಶೆಟ್ಟಿ , ಶ್ರೀ ಕ್ಷೇತ್ರ ಪೂಂಜದ ಪ್ರಧಾನ ಅರ್ಚಕ ಅನಂತ ಆಚಾರ್ಯ, ಸಿದ್ಧಕಟ್ಟೆ ವಿಜಯ ಬ್ಯಾಂಕ್ ಪ್ರಬಂಧಕ ಬೇಬಿ ಕುಂದರ್ ಅವರು ಸಂಜೀವ ಶೆಟ್ಟಿ ಅವರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅಪರ್ಿಸಲಾಯಿತು.

By suddi9

Leave a Reply

Your email address will not be published. Required fields are marked *