ಬಂಟ್ವಾಳ : ತಾಲೂಕು ಸಿದ್ಧಕಟ್ಟೆ ಸ.ಪ.ಪೂ.ಕಾಲೇಜಿನ 2014-15ನೇ ವಿದ್ಯಾರ್ಥಿ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ ಜೂ.30ರಂದು ಕಾಲೇಜಿನಲ್ಲಿ ಜರಗಿತು.
ಸಿದ್ಧಕಟ್ಟೆ ಸ.ಪ್ರ.ದ.ಕಾಲೇಜು ಪ್ರಾಂಶುಪಾಲ ಪ್ರೊ|ಸತ್ಯನಾರಾಯಣ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ನೈತಿಕತೆ ಮತ್ತು ವೈಚಾರಿಕ ಮನೋಭಾವನೆಯನ್ನು ಬೆಳೆಸಿಕೊಂಡು ಸಂಸ್ಥೆ ಹಾಗೂ ದೇಶದ ಒಳಿತಿಗಾಗಿ ತಮ್ಮನ್ನು ಸಮಪರ್ಿಸಿಕೊಳ್ಳಬೇಕು. ರಾಷ್ಟ್ರೀಯ ಸೇವಾ ಯೋಜನೆಯ ತತ್ವವನ್ನು ಪಾಲಿಸಿಕೊಂಡು ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯಲು ಪ್ರಯತ್ನಿಸಬೇಕು ಎಂದು ನುಡಿದರು.

ಕಾಲೇಜು ಪ್ರಾಂಶುಪಾಲ ಪದ್ಮನಾಭ ರೈ ಎನ್. ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಭಾಕರ ಪ್ರಭು, ಪ್ರೌಢ ಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಸುರೇಖಾ ಯು.ಎನ್. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು|ರಕ್ಷಾ ಸ್ವಾಗತಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಕಾರಿ ಶೀನಪ್ಪ ಎನ್. ಪ್ರಸ್ತಾವಿಸಿದರು. ಮಹಮ್ಮದ್ ನವಾಝ್ ವಂದಿಸಿದರು.
