ಬಂಟ್ವಾಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ವಿಶೇಷ ಆದ್ಯತೆಯಿಂದ ಅರ್ಹ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ. ವಿದ್ಯಾಥರ್ಿ ದೆಸೆಯಲ್ಲಿ ಚುನಾವಣೆಯ ಹಾಗೂ ಮತದಾನದ ಮಹತ್ವ ಹಾಗೂ ಅದರ ಬಗ್ಗೆ ಅರಿವು ಉಂಟಾಗಲು ಪುಂಜಾಲಕಟ್ಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಜಾಪ್ರಭುತ್ವ ಮಾದರಿ ಚುನಾವಣೆ ನಡೆಸಲಾಗಿದೆ.
ಸ.ಪ.ಪೂ.ಕಾಲೇಜಿನ 2014-15 ನೇ ಸಾಲಿನ ವಿದ್ಯಾಥರ್ಿ ಸಂಘದ ಚುನಾವಣೆಯನ್ನು ಜೂ.28ರಂದು ನಡೆಸಲಾಯಿತು. ಚುನಾವಣೆ ಕ್ರಮದಂತೆ ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ, ಅಭ್ಯಥರ್ಿ ಘೋಷಣೆ, ಮತಯಾಚನೆ, ಮತಪತ್ರ ಪಡೆದು ಕೈ ಬೆರಳಿಗೆ ಶಾಯಿ ಗುರುತು ಹಾಕಿ ಗುಪ್ತ ಮತದಾನ ನಡೆಸಲಾಯಿತು.

2a

2 (4)

ಹೀಗೆ ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾಥರ್ಿಗಳು ಭಾಗವಹಿಸಿದರು.
ಒಟ್ಟು 5 ಹುದ್ದೆಗಳಿಗಾಗಿ ನಡೆದ ಚುನಾವಣೆಯಲ್ಲಿ 17 ವಿದ್ಯಾಥರ್ಿಗಳು ಚುನಾವಣೆಗೆ ಸ್ರ್ಪಸಿದ್ದರು. ವಿದ್ಯಾಥರ್ಿ ನಾಯಕ ಹುದ್ದೆಗಾಗಿ ಪ್ರೀತಂ, ಆಯಿಷಾ, ಮೋಹನ್.ಕೆ. ಮತ್ತು ಪೂಜಾ ಸ್ಪಧರ್ೆಯಲ್ಲಿದ್ದರು. ಅದರಂತೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮಂತ್ರಿ, ಆರೋಗ್ಯ ಮಂತ್ರಿ, ಸ್ವಚ್ಛತಾಮಂತ್ರಿ ಮತ್ತು ಕ್ರೀಡಾಮಂತ್ರಿಗಳಿಗಾಗಿ ಚುನಾವಣೆ ಶಾಂತಿಯತವಾಗಿ ನಡೆಯಿತು. ಒಟ್ಟು 512 ಮತದಾರರಿದ್ದು 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಪ್ರಿಸೈಡಿಂಗ್ ಅಕಾರಿ ಮತ್ತು ಇಬ್ಬರು ಮತಗಟ್ಟೆ ಅಕಾರಿಗಳು ಮತ್ತು ಒಬ್ಬರು ಮೇಲ್ವಿಚಾರಕ ಶಿಕ್ಷಕ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಿದರು. ವಿದ್ಯಾಥರ್ಿಗಳು ಸರತಿ ಸಾಲಿನಲ್ಲಿ ನಿಂತು ಶಿಸ್ತು ಮತ್ತು ಶಾಂತಿಯುತವಾಗಿ ಮತದಾನದಲ್ಲಿ ಪಾಲ್ಗೊಳ್ಳಲು ಭದ್ರತಾ ಸಿಬಂದಿಯಾಗಿ ಎನ್.ಸಿ.ಸಿ. ವಿದ್ಯಾಥರ್ಿಗಳು ಕರ್ತವ್ಯ ನಿರ್ವಹಿಸಿದರು. ಚುನಾವಣಾಕಾರಿಯಾಗಿ ಶಿಕ್ಷಕಿ ಕುಮುದ ಎಂ. ಅವರು ಚುನಾವಣಾ ಪ್ರಕ್ರಿಯೆ ನಡೆಸಿದರು.

By suddi9

Leave a Reply

Your email address will not be published. Required fields are marked *